ETV Bharat / state

ಚಾಮರಾಜನಗರ: ಕೊರೊನಾ ಟೆಸ್ಟ್ ಮಾಡಿಸದಿದ್ರೆ ₹ 10 ಸಾವಿರ ದಂಡ... ಡಂಗೂರ ಸಾರಿಸಿ ಜನಜಾಗೃತಿ!

ರಾಜ್ಯದಲ್ಲಿ ಕೊರೊನಾ ಸಮುದಾಯಕ್ಕೆ ಹರಡುತ್ತಿರುವುದರ ಶಂಕೆ ಹಿನ್ನೆಲೆ ಚಾಮರಾಜನಗರದ ಮಂಗಲ ಗ್ರಾಮದ ಮುಖಂಡರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

Dangura
ಡಂಗೂರ
author img

By

Published : Jul 12, 2020, 1:06 PM IST

ಚಾಮರಾಜನಗರ: ಬೆಂಗಳೂರು, ಗುಂಡ್ಲುಪೇಟೆ, ಮಂಡ್ಯಕ್ಕೆ ಕೆಲಸ ಅರಸಿ ಹೋದವರು ಗ್ರಾಮಕ್ಕೆ ಮರಳುವಾಗ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಂಡು ಬರಬೇಕೆಂದು ಜಿಲ್ಲೆಯ ಮಂಗಲ ಗ್ರಾಮದ ಮುಖಂಡರು ಡಂಗೂರ ಸಾರಿಸಿದ್ದಾರೆ.

ಡಂಗೂರದ ಮೂಲಕ ಜನಜಾಗೃತಿ
ಒಂದು ವೇಳೆ ಟೆಸ್ಟ್ ಮಾಡಿಸಿಕೊಳ್ಳದೇ ಗ್ರಾಮಕ್ಕೆ ಬಂದರೆ 10 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ ಎಂಬ ನಿರ್ಣಯವನ್ನು ಗ್ರಾಮದ ಮುಖಂಡರು ಕೈಗೊಂಡಿದ್ದಾರೆ. ಇದರೊಟ್ಟಿಗೆ ತಮಿಳುನಾಡು, ಮಂಡ್ಯ, ಬೆಂಗಳೂರು, ಗುಂಡ್ಲುಪೇಟೆಗೆ ಯಾರೂ ಕೆಲಸಕ್ಕೆ ಹೋಗಬಾರದು ಅಂತಲೂ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಕೊರೊನಾ ಪ್ರಕರಣಗಳು ಹಳ್ಳಿಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ ತಮ್ಮೂರಿನ ಮಂದಿಗೆ ಮಾತ್ರ ಕ್ಷೌರ, ಅಪರಿಚಿತರಿಗೆ ಗ್ರಾಮ ಪ್ರವೇಶಕ್ಕೆ ನಿರ್ಬಂಧ, ಸಾಮೂಹಿಕ ಕೊರೊನಾ ಟೆಸ್ಟ್, ಸ್ವಯಂ ನಿರ್ಬಂಧದಂತಹ ಹಲವಾರು ತೀರ್ಮಾನಗಳನ್ನು ಜಿಲ್ಲೆಯ ಹಲವು ಗ್ರಾಮಗಳು ಕೈಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.