ಕೊಳ್ಳೇಗಾಲ: ನಾನೊಬ್ಬ ಗೆದ್ದರೆ 75 ವಿಧಾನ ಪರಿಷತ್ ಸದಸ್ಯರು, 224 ವಿಧಾನಸಭಾ ಸದಸ್ಯರಿಗೆ ಸಮ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ನನಗೆ ಮತ ನೀಡಿ ಎಂದು ವಿಧಾನ ಪರಿಷತ್ ಅಭ್ಯರ್ಥಿ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ನಗರದ ತಾಲೂಕು ಕಚೇರಿ ಮುಂಭಾಗ, ಗ್ರಾ.ಪಂಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಸದಸ್ಯರ ವೇತನ ಹೆಚ್ಚಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿ ಅವರು ಮಾತನಾಡಿದರು.
ಗ್ರಾ.ಪಂ ಹೆಸರಿಗಷ್ಟೇ ಸ್ಥಳೀಯ ಸಂಸ್ಥೆಯಾಗಿ ಉಳಿದಿದೆ. ಸರ್ಕಾರ ಈ ಬಗ್ಗೆ ಗಮನ ಕೊಡುತ್ತಿಲ್ಲ. ಗ್ರಾ.ಪಂ ಅನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಪರಿಗಣಿಸಲಾಗುತ್ತಿದೆ. ಚುನಾವಣೆ ಮುಗಿದ ಮೇಲೆ ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸದಸ್ಯರಿಗೆ ಕನಿಷ್ಠ ಸೌಲಭ್ಯ ಸಿಗದೆ ನರಕದಲ್ಲಿದ್ದಾರೆ ಎಂದು ದೂರಿದರು.
ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾರೆ. ಗ್ರಾ.ಪಂ ಸದಸ್ಯರಿಗೆ ನೀಡುತ್ತಿರುವ ಗೌರವಧನ ನೋಡಿದ್ರೆ ನಾಚಿಕೆ ಆಗಬೇಕು. ದಿನಕ್ಕೆ 30 ರೂ. ನಿಗದಿಪಡಿಸಲಾಗುತ್ತಿದೆ. ಇದ್ಯಾವ ಹಣೆಬರಹ? ಇದು ಅವರ ಕೆಲಸಕ್ಕೆ ಗೌರವ ತರುವುದಿಲ್ಲ ಎಂದರು. ಗ್ರಾ.ಪಂ ಅಭಿವೃದ್ಧಿಗೆ ಅನುದಾನ ಕೊಟ್ಟು ವರ್ಷಗಳೇ ಕಳೆದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಿವರಾಮಣ್ಣನ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ: ಗಣ್ಯರ ಕಂಬನಿ