ETV Bharat / state

ಯಡಿಯೂರಪ್ಪ ನನಗೆ ನಂ.1 ಶತ್ರು, ಆದ್ರೂ ಅವರಿಲ್ಲ ಅಂದ್ರೆ ಇವ್ರಿಲ್ಲ: ವಾಟಾಳ್​​ - ಬಳ್ಳಾರಿ ವಿಭಜನೆ

ಯಡಿಯೂರಪ್ಪ ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಈಶ್ವರಪ್ಪನೂ ಇಲ್ಲ, ಯಾವ ಅಪ್ಪನೂ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ವಾಟಾಳ್ ನಾಗರಾಜ್
author img

By

Published : Sep 29, 2019, 5:50 PM IST

ಚಾಮರಾಜನಗರ: ಯಡಿಯೂರಪ್ಪ ನನ್ನ ನಂಬರ್ 1 ಶತ್ರು, ಆದರೆ ಅವರಿಲ್ಲ ಎಂದರೆ ಬಿಜೆಪಿ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬಂಡಿಪುರದ ಮದ್ದೂರು ಚೆಕಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಸರ್ಕಾರ ತಂದವರು ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಈಶ್ವರಪ್ಪನೂ ಇಲ್ಲ, ಯಾವ ಅಪ್ಪನೂ ಇಲ್ಲಾ ಎಂದಿದ್ದಾರೆ.

ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ

ದಸರಾ ಆಚರಣೆ ಕುರಿತು ಮಾತನಾಡಿ, ದಸರಾ ನಾಡಹಬ್ಬ. ಆದರೆ ಯಾವ ಸರ್ಕಾರ ಬರುವುದೋ ಆ ದಸರಾ ಆಗುತ್ತಿರುವುದು ಸರಿಯಲ್ಲ. ವಿಶ್ವವಿಖ್ಯಾತ ದಸರಾ ಬರಬರುತ್ತಾ ಮೈಸೂರಿಗೆ ಸೀಮಿತವಾಗುತ್ತಿದೆ. ಆದ್ದರಿಂದ ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಹೇಳಿದ್ರು.

'ಇಲ್ಲಿ ದರ್ಬಾರು, ಉತ್ತರ ಕರ್ನಾಟಕದಲ್ಲಿ ಕಣ್ಣೀರು'

ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಯದುವಂಶಸ್ಥ ಯದುವೀರ್ ಬಿಡಬೇಕಿತ್ತು. ದಸರಾ ದರ್ಬಾರ್ ಬಿಟ್ಟು ಉತ್ತರ ಕರ್ನಾಟಕ ಜನರ ಸಮಸ್ಯೆ ಕೇಳಬೇಕಿತ್ತು. ಉತ್ತರ ಕರ್ನಾಟಕದ ಜನ ನೀರಿನಲ್ಲಿ ಮುಳುಗಿದ್ದಾರೆ. ಮೈಸೂರಿನಲ್ಲೇ ರಾಜ್ಯದ ಎಲ್ಲಾ ಮಂತ್ರಿಗಳು, ಕೇಂದ್ರ ಸಚಿವರು ಬೀಡು ಬಿಟ್ಟಿದ್ದಾರೆ. ಪ್ರಧಾನಿ ಮೋದಿ ವೈಭವದಿಂದ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ, ಕರ್ನಾಟಕಕ್ಕೇಕೆ ಅವರು ಬರಲಿಲ್ಲ? ರಾಜ್ಯದವರನ್ನು ಗುಲಾಮರಂತೆ ಕಾಣುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ, ಉತ್ತರ ಕರ್ನಾಟಕಕ್ಕೆ ಅಗೌರವ ತೋರಿ ಪರಿಹಾರ ನೀಡದಿದ್ದರೆ ರಾಜ್ಯವೇ ಧಗಧಗ ಎನ್ನಲಿದೆ ಎಂದು ಎಚ್ಚರಿಸಿದರು.

ಗಣಿ ಮಾಲೀಕರ ದರ್ಬಾರಿನಲ್ಲಿ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರದು. ಯಡಿಯೂರಪ್ಪ ಚರಿತ್ರೆ ತರಿಸಿ ನೋಡಬೇಕು, ಬಳ್ಳಾರಿ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

Intro:ಯಡಿಯೂರಪ್ಪ ನನಗೆ ನಂ೧ ಶತೃ ಆದ್ರೂ ಅವರಿಲ್ಲ ಅಂದ್ರೆ ಬಿಜೆಪಿ ಇಲ್ಲ: ವಾಟಾಳ್

ಚಾಮರಾಜನಗರ: ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿರುವ ಮಾತಿಗೆ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಯಡಿಯೂರಪ್ಪ ನನ್ನ ನಂ೧ ಶತೃ, ಆದರೆ ಅವರಿಲ್ಲ ಎಂದರೇ ಬಿಜೆಪಿ ಇಲ್ಲ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.

Body:ಬಂಡೀಪುರದ ಮದ್ದೂರು ಚೆಕಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಯಡಿಯೂರಪ್ಪ, ಸರ್ಕಾರ ತಂದವರು ಯಡಿಯೂರಪ್ಪ ಅವರಿಲ್ಲ ಎಂದರೇ ಬಿಜೆಪಿಯೂ ಇಲ್ಲಾ, ಈಶ್ವರಪ್ಪನೂ ಇಲ್ಲಾ ಯಾವ ಅಪ್ಪನೂ ಇಲ್ಲಾ ಎಂದು ಹೇಳಿದರು.

ದಸರಾ ಆಚರಣೆ ಕುರಿತು ಅವರು ಮಾತನಾಡಿ, ದಸರಾ ನಾಡಹಬ್ಬ ಆದರೆ ಯಾವ ಸರ್ಕಾರ ಬರುವುದೋ ಆ ದಸರಾ ಆಗುತ್ತಿರುವುದು ಸರಿಯಲ್ಲ‌. ವಿಶ್ವ ವಿಖ್ಯಾತ ದಸರಾ ಬರಬರುತ್ತಾ ಮೈಸೂರಿಗೆ ಸೀಮಿತವಾಗುತ್ತಿದೆ ಆದ್ದರಿಂದ, ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಅಭಿಪ್ರಾಯಪಟ್ಟರು.

ಇಲ್ಲಿ ದರ್ಬಾರು- ಉತ್ತರ ಕರ್ನಾಟಕದಲ್ಲಿ ಕಣ್ಣೀರು. ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ನ್ನು ಯದುವಂಶಸ್ಥ ಯದುವೀರ್ ಬಿಡಬೇಕಿತ್ತು. ದಸರಾ ದರ್ಬಾರ್ ಬಿಟ್ಡು ಉತ್ತರ ಕರ್ನಾಟಕ ಜನರ ಸಮಸ್ಯೆ ಕೇಳಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಜನ ನೀರಿನಲ್ಲಿ ಮುಳುಗಿದ್ದಾರೆ
ಮೈಸೂರಿನಲ್ಲೇ ರಾಜ್ಯದ ಎಲ್ಲಾ ಮಂತ್ರಿಗಳು, ಕೇಂದ್ರ ಸಚಿವರು ಬೀಡು ಬಿಟ್ಟಿದ್ದಾರೆ.ಪ್ರಧಾನಿ ಮೋದಿ ವೈಭವದಿಂದ ಅಮೇರಿಕಾಕ್ಕೆ ತೆರಳಿದ್ದಾರೆ, ಕರ್ನಾಟಕಕ್ಕೇಕೆ ಅವರು ಬರಲಿಲ್ಲ, ರಾಜ್ಯದವರನ್ನು ಗುಲಾಮರಂತೆ ಕಾಣುತ್ತಿತುವುದು ಸರಿಯಲ್ಲ ಇದರ ವಿರುದ್ಧ ಹೋರಾಟ ಅನಿವಾರ್ಯ, ಉತ್ತರ ಕರ್ನಾಟಕಕ್ಕೆ ಅಗೌರವ ತೋರಿ ಪರಿಹಾರ ನೀಡದಿದ್ದರೇ ರಾಜ್ಯವೇ ಧಗಧಗ ಎನ್ನಲಿದೆ ಎಂದು ಎಚ್ಚರಿಸಿದರು.

Conclusion:ಗಣಿ ಮಾಲೀಕರ ದರ್ಬಾರಿನಲ್ಲಿ ಬಳ್ಳಾರಿ ಯಾವುದೇ ಕಾರಣಕ್ಕೂ ವಿಭಜನೆಯಾಗಬಾರದು, ಯಡಿಯೂರಪ್ಪ ಚರಿತ್ರೆ ತರಿಸಿ ನೋಡಬೇಕು, ಬಳ್ಳಾರಿ ವಿಭಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.