ETV Bharat / state

ತಾಯಿಗೆ ಭಾರವಾದ ಮಗು.. ಕಸದ ರಾಶಿಯಲ್ಲಿ ಕಂದನ ಎಸೆದು ಪೊಲೀಸರ ಮುಂದೆ ಪ್ರತ್ಯಕ್ಷಳಾದ ಹೆತ್ತಮ್ಮ! - ಚಾಮರಾಜನಗರದಲ್ಲಿ ಕಸದಲ್ಲಿ ಮಗು ಪತ್ತೆ

ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು- ಹುಟ್ಟಿದ ಎರಡೇ ದಿನಕ್ಕೆ ಕಸದ ರಾಶಿಯಲ್ಲಿ ಕಂದಮ್ಮ- ಪೊಲೀಸರ ಮುಂದೆ ಪ್ರತ್ಯಕ್ಷಳಾದ ಹೆತ್ತಮ್ಮ

Two days child found in Chamarajanagar, child found in garbage at Chamarajanagar, Chamarajanagar news,  ಚಾಮರಾಜನಗರದಲ್ಲಿ ಎರಡು ದಿನದ ಮಗು ಪತ್ತೆ, ಚಾಮರಾಜನಗರದಲ್ಲಿ ಕಸದಲ್ಲಿ ಮಗು ಪತ್ತೆ, ಚಾಮರಾಜನಗರ ಸುದ್ದಿ,
ತಾಯಿಗೆ ಭಾರವಾದ ಮಗು
author img

By

Published : Jul 4, 2022, 11:55 AM IST

Updated : Jul 4, 2022, 12:21 PM IST

ಚಾಮರಾಜನಗರ: ನವಜಾತ ಶಿಶುಗಳನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗುವ ನಿರ್ದಯಿ ತಾಯಂದಿರು ಅಲ್ಲಲ್ಲಿ ಕಂಡುಬರುತ್ತಾರೆ. ಜಿಲ್ಲೆಯಲ್ಲೂ ತಾಯಿಯೋರ್ವಳು ತಮ್ಮ ಕಂದನನ್ನು ಹುಟ್ಟಿದ ಎರಡೇ ದಿನದಲ್ಲಿ ಕಸದ ರಾಶಿಗೆ ಹಾಕಿದ್ದರು. ಆದ್ರೆ ಮಗು ಬಿಟ್ಟು ಹೋದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಘಟನೆಯೇನೂ ಸುಖಾಂತ್ಯ ಕಂಡಿಲ್ಲ.

ಹೌದು, ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ‌. ಮಗು ಕಂಡು ಹೌಹಾರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸುವಾಗ ತಾಯಿ ದಿಢೀರ್​ ಪ್ರತ್ಯಕ್ಷವಾಗಿದ್ದಾರೆ. 'ನಾನೇ ಆ ಮಗುವಿನ ತಾಯಿ. ಮಗುವನ್ನು ಬಿಟ್ಟು ಹೋಗಿದ್ದು ನಾನೇ ಎಂದು ಅಲವತ್ತುಕೊಂಡಿದ್ದಾರೆ. ನನಗೆ ಮದುವೆ ಆಗಿದ್ದು, ಗಂಡ ಬಿಟ್ಟು ಹೋಗಿದ್ದಾನೆ.‌ ಮಗು ಸಾಕುವ ಆಸಕ್ತಿ‌ ಇಲ್ಲವೆಂದು' ಆ ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಓದಿ: ಭಾರತ ಗಡಿ ಪ್ರವೇಶಿಸಿದ ಪಾಕಿಸ್ತಾನದ ಮಗುವನ್ನು ಕುಟುಂಬಸ್ಥರಿಗೆ ಮರಳಿಸಿದ ಯೋಧರು

ಕೊನೆಗೇ ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿರುವ ಪೊಲೀಸರು, ಕಾನೂನು ಪ್ರಕಾರ ದತ್ತು ಕೊಡಿಸಲಾಗುವುದು. ಅಲ್ಲಿಯ ತನಕ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಮಗುವಿಗೆ ಯಾವುದೇ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿ ವಾಪಸ್​ ಕಳುಹಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Last Updated : Jul 4, 2022, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.