ಚಾಮರಾಜನಗರ: ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಪ್ರೀತಿ, ಪ್ರೇಮದ ಹೆಸರಲ್ಲಿ ತಲೆಕೆಡಿಸಿ ಅಪಹರಿಸಿದ್ದ ಯುವಕರಿಬ್ಬರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಯಳಂದೂರು ತಾಲ್ಲೂಕಿನ ಸೋಮು ಮತ್ತು ಹನೂರು ತಾಲ್ಲೂಕಿನ ಶ್ರೀನಿವಾಸ್ ಬಂಧಿತ ಆರೋಪಿಗಳು. ಬಂಧಿತರಿಬ್ಬರು ಸ್ನೇಹಿತರಾಗಿದ್ದು ಕೊಳ್ಳೇಗಾಲದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯರಿಬ್ಬರನ್ನು ಪ್ರೀತಿ ಹೆಸರಲ್ಲಿ ಮರಳು ಮಾಡಿ ಕಳೆದ 30ರಂದು ಕಾಲೇಜಿನಿಂದಲೇ ಅಪಹರಿಸಿದ್ದರು.
ಇದನ್ನೂ ಓದಿರಿ: ಕೊಳ್ಳೇಗಾಲ: ಹೆಂಡತಿಯೊಟ್ಟಿಗೆ ಜಗಳ, ವಿಷ ಕುಡಿದಿರುವೆ ಎಂದು ಪೊಲೀಸರಿಗೆ ಕರೆ ಮಾಡಿದ ಪತಿರಾಯ!
ಈ ಸಂಬಂಧ ವಿದ್ಯಾರ್ಥಿನಿಯರ ಪಾಲಕರು ಕೊಳ್ಳೇಗಾಲ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಯುವಕರು ವಿದ್ಯಾರ್ಥಿನಿಯರ ಜೊತೆ ಚಿಕ್ಕಮಗಳೂರಿನಲ್ಲಿ ಇರುವುದನ್ನು ಪತ್ತೆ ಹಚ್ಚಿ ಕೊಳ್ಳೇಗಾಲಕ್ಕೆ ಕರೆ ತಂದಿದ್ದಾರೆ.
ಯುವಕರ ವಿರುದ್ಧ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.