ಕೊಳ್ಳೇಗಾಲ: ಗುರುವಾರ ರಾತ್ರಿ ಸುರಿದ ಮಳೆ(rain in kollegala)ಗೆ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದ ರಸ್ತೆಯಲ್ಲಿನ ಬೃಹತ್ ಗಾತ್ರದ ಮರ ನೆಲಕ್ಕೆ ಬಾಗಿ(tree fell down) ದೆ. ಪರಿಣಾಮ ಓಮಿನಿ ಕಾರೊಂದು(car damaged) ಜಖಂಗೊಂಡಿದೆ.
ನಿನ್ನೆ ರಾತ್ರಿ 7 ಗಂಟೆಗೆ ಪ್ರಾರಂಭವಾದ ಮಳೆ(rain) ಇಂದು ಕೂಡ ಮುಂದುವರೆದಿದೆ. ಮಹದೇಶ್ವರ ಕಲ್ಯಾಣ ಮಂಟಪದ ರಸ್ತೆಯ ಪಕ್ಕದಲ್ಲಿರುವ ಭಾರಿ ಗಾತ್ರದ ಒಣಗಿದ ಮರವೊಂದು ರಾತ್ರಿ ಉರುಳಿದೆ. ಸಮೀಪವಿದ್ದ ವಿದ್ಯುತ್ ಕಂಬದ ತಂತಿಯ ಮೇಲೆ ಮರ ಬಾಗಿದ್ದು, ಇನ್ನೇನು ಧರೆಗುರುಳುವುದರಲ್ಲಿದೆ. ಹೀಗಾಗಿ ಬಡಾವಣೆಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಇದನ್ನೂ ಓದಿ: Watch.. ಭೀಕರ ರಸ್ತೆ ಅಪಘಾತ: ಧಗಧಗನೆ ಹೊತ್ತಿ ಉರಿದ ಟಿಪ್ಪರ್, ದ್ವಿಚಕ್ರ ವಾಹನ ಸವಾರ ಸಾವು
ಪಟ್ಟಣದಾದ್ಯಂತ ಒಣಗಿದ ಹಾಗೂ ಹಳೆಯ ಹಲವು ಮರಗಳಿದ್ದರೂ ಅರಣ್ಯ ಇಲಾಖೆಯಾಗಲಿ ಮತ್ತು ನಗರಸಭೆಯಾಗಲಿ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ವಿಚಾರ ತಿಳಿದ ಅರಣ್ಯಾಧಿಕಾರಿಗಳು (forest department) ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮರ ತೆರವುಗೊಳಿಸಲು ಮುಂದಾಗಿದ್ದಾರೆ.