ETV Bharat / state

ಹುಲಿ ಸಂರಕ್ಷಿತಾರಣ್ಯದ ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರವಾಸಿಗರ ಸ್ನಾನ, ಮೋಜು ಮಸ್ತಿ - ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರವಾಸಿಗರು

ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಹಾದಿಯಲ್ಲಿ ಚೆಕ್‍ಪೋಸ್ಟ್​ನಿಂದ 4-5 ಕಿಮೀ‌ ದೂರದಲ್ಲಿರುವ ಝರಿ ಬಳಿ ಟೆಂಪೋ ಟ್ರಾವೆಲ್ ನಿಲ್ಲಿಸಿ ಪ್ರವಾಸಿಗರು ಸ್ನಾನ ಮಾಡಿ, ಸಿಗರೇಟ್ ಸೇದುತ್ತಾ ನಿಂತಿರುವುದನ್ನು ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ.

tourist bathing
ಬಿಳಿಗಿರಿರಂಗನ ಬೆಟ್ಟದ
author img

By

Published : Nov 30, 2021, 8:04 PM IST

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟಕ್ಕೆ ಸಾಗುವ ಕಾಡಿನಲ್ಲಿ ಇಳಿದು ಫೋಟೋ ತೆಗೆದರೆ ದಂಡ ವಿಧಿಸುವ ಎಚ್ಚರಿಕೆ ಮಧ್ಯೆಯೂ ಪ್ರವಾಸಿಗರು ಇಲ್ಲಿ ಹರಿಯುವ ನೀರಿನಲ್ಲಿ ಸ್ನಾನ ಮಾಡಿ, ಮೋಜು ಮಾಡುತ್ತಿರುವುದು ಕಂಡು ಬಂದಿದೆ.

ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಹಾದಿಯಲ್ಲಿ ಚೆಕ್‍ಪೋಸ್ಟ್‌ನಿಂದ 4-5 ಕಿಮೀ‌ ದೂರದಲ್ಲಿರುವ ಝರಿಯಲ್ಲಿ ಟೆಂಪೋ ಟ್ರಾವೆಲ್ ನಿಲ್ಲಿಸಿ ಪ್ರವಾಸಿಗರು ಸ್ನಾನ ಮಾಡಿ, ಸಿಗರೇಟ್ ಸೇದುತ್ತಾ ನಿಂತಿರುವುದನ್ನು ದಾರಿಹೋಕರೊಬ್ಬರು ಸೆರೆಹಿಡಿದಿದ್ದಾರೆ.

ಗಸ್ತು ತಿರುಗಬೇಕಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ಹೀಗೆ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುವುದು, ಯುವಕರು ಸ್ನಾನ ಮಾಡಿದ್ದು ಬಹಿರಂಗವಾಗಿದೆ. ಪ್ರಾಣಿಗಳು ದಾಳಿ ಮಾಡಿದ್ದರೆ ಯಾರು ಹೊಣೆ ಎಂಬುದು ಪ್ರಶ್ನೆಯಾಗಿದೆ.

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಮೈ ಮರೆತಿರುವುದರಿಂದ ಪ್ರವಾಸಿಗರು ಮೋಜು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.