ETV Bharat / state

ವ್ಯಾಘ್ರಗಳ ಬದುಕಿಗೆ ಕಂಟಕವಾಗಿದೆ ಚೀನಿ ವಯಾಗ್ರ ಹಾಗೂ ಕಿಡಿಗೇಡಿಗಳ ಪಾಷಾಣ..

ಮಾನವ- ವನ್ಯಮೃಗ ಸಂಘರ್ಷದಿಂದ ಈಗಾಗಲೇ ಸಾಕಷ್ಟು ಕಾಡು ಪ್ರಾಣಿಗಳು ಬಲಿಯಾಗಿವೆ. ಈಗ ಚೀನಾ ಮೂಢನಂಬಿಕೆಯೂ ಕೂಡಾ ಹುಲಿಬೇಟೆಗೆ ಕಾರಣವಾಗಿದ್ದು, ಅದರ ಮಾಹಿತಿ ಇಲ್ಲಿದೆ..

tiger conservation
ಹುಲಿ ಸಂರಕ್ಷಣೆ
author img

By

Published : Jul 29, 2020, 4:26 PM IST

ಚಾಮರಾಜನಗರ : ಚೀನಿಯರು ನಂಬಿರುವ ಮೂಢನಂಬಿಕೆಗೆ ಹಾಗೂ ಪ್ರಾಣಿ ಮತ್ತು ಮಾನವ ಸಂಘರ್ಷವೇ ಹುಲಿಗಳಿಗೆ ಕಂಟಕವಾಗಿದೆ‌. ಹುಲಿಯ ಚರ್ಮ, ಉಗುರು, ಮೂಳೆ, ಹಲ್ಲುಗಳಲ್ಲಿ ಔಷಧೀಯ ಗುಣಗಳಿವೆ ಎಂಬ ಚೀನಿಯರ ಬಹುದೊಡ್ಡ ಮೂಢನಂಬಿಕೆ ಹುಲಿ ಬೇಟೆಗೆ ಕಾರಣವಾಗ್ತಿದೆ.

tiger conservation
ಹುಲಿ ಸಂರಕ್ಷಣೆ

ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಈಟಿವಿ ಭಾರತಕ್ಕೆ ಅಂಕಿ-ಅಂಶ ನೀಡಿದ್ದು, 1994-2000 ಇಸ್ವಿವರೆಗೆ ಭಾರತದಲ್ಲಿ 226 ಹುಲಿ ಚರ್ಮ, 1007 ಕೆಜಿ ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಲಿ ಚರ್ಮಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 20 ಸಾವಿರ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ. ದೇಶದಲ್ಲಿ 5-10 ಸಾವಿರ ರೂ. ಬೇಟೆಗಾರರು ಮಾರಾಟ ಮಾಡಿರುವ ನಿದರ್ಶನವಿದೆ ಎಂದು ತಿಳಿಸಿದ್ದಾರೆ.

ಚೀನಾದ ಮೂಢನಂಬಿಕೆಗಳು : ಚೀನಾ ದೇಶ ಹುಲಿಯ ಮೇಲೆ ವಿಪರೀತ ಮೂಢನಂಬಿಕೆ ಇರಿಸಿಕೊಂಡು ಔಷಧಿಯನ್ನು ತಯಾರಿಸುವುದು ಜಾಗತಿಕವಾಗಿ ದೊಡ್ಡ ತಲೆನೋವಾಗಿದೆ‌. ಉದಾಹರಣೆ ನೋಡುವುದಾದ್ರೆ ಹುಲಿಯ ಕೊಬ್ಬನ್ನು ವಾಂತಿ ನಿಲ್ಲಿಸಲು, ನಾಯಿ ಕಡಿತಕ್ಕೆ, ಮಕ್ಕಳ ಖಾಯಿಲೆಗೆ ಬಳಸುತ್ತಾರೆ. ಮಾಂಸವನ್ನು ಶಕ್ತಿ ವರ್ಧನೆಗೆ, ಮಲೇರಿಯಾ ವಾಸಿ ಮಾಡಲು ಚರ್ಮವನ್ನು ಮನೋರೋಗಗಳಿಗೆ, ಬಾಲವನ್ನು ಚರ್ಮರೋಗಕ್ಕೆ, ಹೊಟ್ಟೆ ಭಾಗದ ಮಾಂಸವನ್ನು ಹೊಟ್ಟೆ ಸಂಬಂಧಿತ ಕಾಯಿಲೆಗಳಿಗೆ ಚೀನಿಯರು ಮತ್ತು ಕೆಲ ಈಶಾನ್ಯ ರಾಜ್ಯಗಳಲ್ಲಿ ಬಳಸುತ್ತಿದ್ದಾರೆ.

tiger conservation
ಹುಲಿ ಸಂರಕ್ಷಣೆ

ಹುಲಿಯ ಮೂಳೆಯನ್ನು ಮೂಳೆ ಮುರಿತಕ್ಕೆ,ಅಲ್ಸರ್,ಭೂತ ಬಿಡಿಸಲು, ಸೊಂಟ ನೋವು, ಆತ್ಮವಿಶ್ವಾಸ ವೃದ್ಧಿಗೆ ಹುಲಿಯ ಮೆದುಳನ್ನು ಸೋಮಾರಿತನ ಹೋಗಲಾಡಿಸಲು ಮತ್ತು ಮೊಡವೆ ಔಷಧಿಗಾಗಿ, ಉಗುರುಗಳನ್ನು ಧೈರ್ಯ ವೃದ್ಧಿಗೆ, ಮಕ್ಕಳಿಗೆ ಭಯ ಹೋಗಲಾಡಿಸಲು ಬಳಸುವ ಅಭ್ಯಾಸವಿದೆ. ಇದರೊಟ್ಟಿಗೆ, ಹೆಚ್ಚಾಗಿ ವಯಾಗ್ರ ತಯಾರಿಕೆಗೆ ಹುಲಿಮಾಂಸವನ್ನು ಬಳಸುವುದರಿಂದ ಚೀನಾ ದೊಡ್ಡ ಮೂಢನಂಬಿಕೆಯನ್ನೇ ಹುಟ್ಟುಹಾಕಿದ್ದು ಅದರ ಪ್ರಭಾವ ಜಗತ್ತಿನಲ್ಲೆಡೆ ಹರಡುತ್ತಿದೆ.

ಕಳ್ಳಮಾಲುಗಳು ಅಧಿಪತ್ಯ ಸಾಧಿಸಿದ್ದು ಬೇರೆ ಬೇರೆ ಪ್ರಾಣಿಗಳ ಉಗುರು, ಚರ್ಮ, ಮಾಂಸವನ್ನು ಮಾರಾಟ ಮಾಡುವ ಜಾಲ ವಿಶ್ವವ್ಯಾಪಿ ಹರಡಿದ್ದು, ಹುಲಿ ಭೋಗದ ವಸ್ತುವಾಗಿಯೇ ಮುಂದುವರೆಯುತ್ತಿದೆ. ಹಿಂದೆ ಮೋಜಿಗಾಗಿ ಬೇಟೆಯಾಡುತ್ತಿದ್ದರೆ ಈಗ ಮೂಢನಂಬಿಕೆಗಳಿಗೆ ಬಲಿ ಪಡೆಯುತ್ತಿದ್ದಾರೆ‌.

ಇನ್ನು, ಪ್ರಾಣಿ ಮತ್ತು ಮಾನವ ಸಂಘರ್ಷವೂ ಕೂಡ ಹುಲಿಯ ಉಳಿವಿಗೆ ಉರುಳು ತೊಡಿಸುತ್ತಿದೆ. ವಿಷ ಹಾಕಿ ಕೊಲ್ಲುವುದು ಕಾಡಂಚಿನ ಭಾಗದಲ್ಲಿ ಈಗಲೂ ನಿಂತಿಲ್ಲ. ಇದರೊಟ್ಟಿಗೆ, ಕಾಡಿನ ಪ್ರದೇಶ ಕಿರಿದಾಗುವುದು, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುವುದು ಕೂಡ ಅದರ ಬದುಕಿಗೆ ಮಾರಕವಾಗಲಿದೆ.

tiger conservation
ಹುಲಿ ಸಂರಕ್ಷಣೆ

ಕಳ್ಳಬೇಟೆಯ ಮೇಲೆ ನಿಯಂತ್ರಣ ಸಾಧಿಸಿರುವಂತೆಯೇ ಅರಣ್ಯ ಇಲಾಖೆ ಜಾಗೃತಿಯನ್ನೂ ಮೂಡಿಸಬೇಕಿದೆ. ಹುಲಿ ಬರುತ್ತೆ ಎಂದು ಕಳೆದ ವರ್ಷ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಇಟ್ಟಿದ್ದು ಕೂಡ ಇದಕ್ಕೊಂದು ಉದಾಹರಣೆ. ಸ್ಪಷ್ಟ ನೀತಿ, ಕಾಡಿನ ಒತ್ತುವರಿ ತೆರವು ಜೊತೆಗೆ ನಿರಂತರ ಜಾಗೃತಿ ಮೂಲಕವಷ್ಟೇ ಹುಲಿ ಎಂಬ ಸುಸ್ಥಿರ ಅಭಿವೃದ್ಧಿ, ಉತ್ತಮ ಪರಿಸರದ ಸಂಕೇತ ಉಳಿಯಲಿದೆ.

ಪ್ರಪಂಚದಲ್ಲಿರುವ ಹುಲಿಗಳಲ್ಲಿ ಕಾಡಿನಲ್ಲಿರುವ ಹುಲಿಗಳಿಗಿಂತ ಹಲವಾರು ಪಟ್ಟು ಹೆಚ್ಚು ಮೃಗಾಲಯಗಳಲ್ಲಿ, ಸಾಕು ಪ್ರಾಣಿಯಾಗಿ ಬಳಕೆಯಾಗುತ್ತಿದೆ. ಜಾಗತಿಕವಾಗಿಯೂ ನೀತಿ-ನಿಯಮ, ಮಾಂಸ ಮಾರುಕಟ್ಟೆಗಳ ವ್ಯವಹಾರ ಬದಲಾಗಬೇಕಿದೆ.

ಕಾಡಿಗೆ ಭೂಷಣವಾಗಿರುವ ಹುಲಿಗಳನ್ನು ಉಳಿಸಿದರಷ್ಟೇ ಸುಂದರ ಬದುಕು ಮನುಷ್ಯನದಾಗುತ್ತದೆ. ಇಲ್ಲವೇ ಹುಲಿ ಕಾಣೆಯಾದಷ್ಟೇ ವೇಗವಾಗಿ ಮನುಷ್ಯನೂ ಮರೆಯಾಗುತ್ತಾನೆ.

ಫೋಟೊ ಕೃಪೆ

ಮನೋಜ್ ಕುಮಾರ್, ಸಿಸಿಎಫ್
ವೇಣುಗೋಪಾಲ್, ವನ್ಯಜೀವಿ ಛಾಯಗ್ರಾಹಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.