ETV Bharat / state

ಮೂರು‌ ದಿನ ಮಾದಪ್ಪನ ಬೆಟ್ಟಕ್ಕೆ ಭಕ್ತರಿಗಿಲ್ಲ ಪ್ರವೇಶ

author img

By

Published : Dec 9, 2020, 9:32 AM IST

ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇದೇ ಡಿಸೆಂಬರ್ 12 ರಿಂದ 14 ರವರೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ‌ ಜಿಲ್ಲಾಡಳಿತ ಆದೇಶಿಸಿದೆ.

Three day no entry to Male Mahadeshwara Hill
ಮೂರು‌ ದಿನ ಮಾದಪ್ಪನ ಬೆಟ್ಟಕ್ಕಿಲ್ಲ ಪ್ರವೇಶ

ಚಾಮರಾಜನಗರ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು 3 ದಿನಗಳ ಕಾಲ ನಿರ್ಬಂಧಿಸಲಾಗಿದೆ.

ಕಡೇ ಕಾರ್ತಿಕ ಸೋಮವಾರದಂದು ವಿಶೇಷ ಪೂಜೆಗಳು, ತೆಪ್ಪೋತ್ಸವ ಜರುಗಲಿದ್ದು ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಓದಿ: ಇಂದು ರೈತರಿಂದ ಬಾರುಕೋಲು ಚಳವಳಿ: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಈ ವರ್ಷದ ಎಲ್ಲಾ ಮುಖ್ಯ ಜಾತ್ರೆಗಳು, ರಥೋತ್ಸವಗಳಿಗೂ ಕೊರೊನಾ ಅಡಚಣೆ ಉಂಟು ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ‌ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ದೀಪಾವಳಿ ರಥೋತ್ಸವವು ಕೂಡಾ ರದ್ದಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.