ETV Bharat / state

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಮೂರು ಹಸು ಸಾವು

author img

By

Published : Jun 18, 2020, 8:37 PM IST

ವಿದ್ಯುತ್ ತಂತಿಯಿಂದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ಮೂರು ಹಸುಗಳು ಮೃತಪಟ್ಟ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೂ ಮೂರು ಹಸುಗಳ ಸ್ಥಿತಿ ಚಿಂತಾಜನಕವಾಗಿದ್ದು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

Three cows burned after an accidental fire in Chamarajanagara
ಆಕಸ್ಮಿಕ ಬೆಂಕಿಯಿಂದ ಮೃತಪಟ್ಟ ರಾಸುಗಳು

ಚಾಮರಾಜನಗರ: ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಮೂರು ಹಸುಗಳು ಮೃತಪಟ್ಟು ಇನ್ನೂ ಮೂರು ಹಸುಗಳ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹನೂರು ತಾಲೂಕಿನ ಎಲ್ಲೆಮಾಳ ಸಮೀಪದ ಕೆವಿಎನ್ ದೊಡ್ಡಿಯಲ್ಲಿ ನಡೆದಿದೆ.

ಗ್ರಾಮದ ಅಯ್ಯಪ್ಪ ಎಂಬುವರಿಗೆ ಸೇರಿದ ಜಾನುವಾರುಗಳು ಇವಾಗಿವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ತಂತಿಯಿಂದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹಸುಗಳ ಚೀರಾಟ ಕೇಳಿ ನೆರೆಹೊರೆಯವರು ಗಮನಿಸಿದಾಗ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿರುವುದು ತಿಳಿದಿದೆ‌.

ಬೆಂಕಿ ನಂದಿಸಲು ಸ್ಥಳೀಯರು ಯಶಸ್ವಿಯಾದರೂ ಅಷ್ಟರಲ್ಲಾಗಲೇ ಮೂರು ಹಸುಗಳು ಮೃತಪಟ್ಟಿದ್ದವು. ಇನ್ನೂ ಮೂರು ಹಸುಗಳ ಸ್ಥಿತಿ ಚಿಂತಾಜನಕವಾಗಿದ್ದು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನಿಡಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.