ಚಾಮರಾಜನಗರ: ಕಳೆದ 5 ದಿನಗಳ ಹಿಂದೆ ಬೇಗೂರು ಸಮೀಪದ ನಿಟ್ರೆಯಲ್ಲಿ ಕಾರಿನೊಂದಿಗೆ ವ್ಯಕ್ತಿಯೋರ್ವ ಸುಟ್ಟು ಕರಕಲಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಮೃತಪಟ್ಟ ವ್ಯಕ್ತಿ ಚಾಮರಾಜನಗರದ ಶಿಕ್ಷಕ ರಂಗಸ್ವಾಮಿ ಎಂದು ಗುರುತಿಸಲಾಗಿದ್ದು, ಹತ್ಯೆಯಾದ ನಂತರ ಈ ಕೊಲೆಯ ಅಸಲಿಯತ್ತು ಏನೆಂಬುದು ತಿಳಿದುಬಂದಿದೆ.
ಗುಂಡ್ಲುಪೇಟೆ ಮೂಲದ ರಾಜೇಶ್ವರಿ (ಹೆಸರು ಬದಲಾಯಿಸಲಾಗಿದೆ), ರಘು ಮತ್ತು ಸಿದ್ದು ಎಂಬವರನ್ನು ಬಂಧಿಸಿದ್ದಾರೆ. ರಘು ಸ್ಟಂಟ್ ಮ್ಯಾನ್ ಆಗಿದ್ದು, ಕೆಜಿಎಫ್ ಚಿತ್ರ ಸೇರಿದಂತೆ 10 ಚಿತ್ರದಲ್ಲಿ ನಟಿಸಿದ್ದಾನೆ ಎಂದು ಎಸ್ಪಿ ಎಚ್.ಡಿ.ಆನಂದಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಳುವಾದ ಕಾಮುಕತನ: ಮೃತ ಶಿಕ್ಷಕ ರಂಗಸ್ವಾಮಿ ಹಲವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ರಾಜೇಶ್ವರಿಯ ಜೊತೆಯೂ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇಬ್ಬರೂ ಅಶ್ಲೀಲವಾಗಿರುವ ಫೋಟೊವನ್ನು ತೆಗೆದುಕೊಂಡಿದ್ದ ಆತ ಮತ್ತೆ ಮತ್ತೆ ಸೆಕ್ಸ್ಗಾಗಿ ಪೀಡಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ವಿಚಾರ ತಿಳಿದ ರಘು, ಸಿದ್ದು ಇಬ್ಬರು ರಾಜೇಶ್ವರಿಯೊಂದಿಗೆ ಸಂಚು ರೂಪಿಸಿ ರಂಗಸ್ವಾಮಿಯನ್ನು ಮರಿಯಾಲ ಕೈಗಾರಿಕಾ ಪ್ರದೇಶಕ್ಕೆ ಕರೆತಂದು ಹೆಲ್ಮೆಟ್ ನಿಂದ ಮುಖ, ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿ ಶವವನ್ನು ಆತನ ಕಾರಿನಲ್ಲೇ ನಿಟ್ರೆ ಬಳಿ ತೆಗೆದುಕೊಂಡು ಹೋಗಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಇನ್ನು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದು ಸಿಡಿಆರ್, ಟವರ್ ಡಂಪಿಂಗ್ ಮಾಹಿತಿಗಳು ಮತ್ತು ಇನ್ನಿತರೆ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿ,
ಪ್ರಕರಣದ ತನಿಖೆ ನೇತೃತ್ವ ವಹಿಸಿದ್ದ ಗುಂಡ್ಲುಪೇಟೆ ಸಿಪಿಐ ಸಿ.ಎನ್.ಬಾಲಕೃಷ್ಣ, ಬೇಗೂರು ಪಿಎಸ್ ಐ ಲೋಹಿತ್, ತೆರಕಣಾಂಬಿ ಪಿಎಸ್ ಐ ಚಿಕ್ಕರಾಜಶೆಟ್ಟಿ ಅವರ ವಿಶೇಷ ತನಿಖಾ ತಂಡಕ್ಕೆ ಇದೇ ವೇಳೆ ನಗದು ಪುರಸ್ಕಾರವನ್ನು ಘೋಷಿಸಿದರು.