ETV Bharat / state

ಹೆಚ್​ ವಿಶ್ವನಾಥ್​ ಧೃತಿಗೆಡುವುದು ಬೇಡ, ಸರ್ಕಾರ-ಪಕ್ಷ ಅವರ ಪರವಿದೆ: ಸಚಿವತ್ರಯರ ಅಭಯ - Village Swarajya Program

ವಿಧಾನ ಪರಿಷತ್​ ಸದಸ್ಯ ಹೆಚ್.ವಿಶ್ವನಾಥ್ ಅವರೊಂದಿಗೆ ನಾವೆಲ್ಲಾ ಸದಾ ಇರುತ್ತೇವೆ. ಯಾರೂ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ ಎಂದು ಸಚಿವ ಕೆ.ಎನ್. ಗೋಪಾಲಯ್ಯ ಹೇಳಿದ್ದಾರೆ.

BJP Ministers
ಬಿಜೆಪಿ ಸಚಿವರು
author img

By

Published : Dec 1, 2020, 1:49 PM IST

ಚಾಮರಾಜನಗರ: ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲದಲ್ಲಿ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವರಾದ ಆರ್.ಅಶೋಕ್, ಎಸ್.ಟಿ. ಸೋಮಶೇಖರ್ ಹಾಗೂ ಗೋಪಾಲಯ್ಯ ಹೆಚ್.ವಿಶ್ವನಾಥ್​ ಪರ ಬ್ಯಾಟಿಂಗ ಮಾಡಿ ಅಭಯ ನೀಡಿದರು.

ಸಚಿವರ ಪ್ರತಿಕ್ರಿಯೆ

ಹೆಚ್.ವಿಶ್ವನಾಥ್ ಅವರು ಸಚಿವರಾಗಬೇಕೆನ್ನುವ ಬಯಕೆ ನಮಗೆಲ್ಲಾ ಇತ್ತು. ಆದರೆ, ಹೈಕೋರ್ಟ್ ನೀಡಿರುವ ಆದೇಶ ಶಾಕ್ ನೀಡಿದೆ. ಇದರಿಂದಾಗಿ ಅವರು ಧೃತಿಗೆಡುವುದು ಬೇಡ, ಸಿಎಂ ಹಾಗೂ ವರಿಷ್ಠರು ಅಪೀಲ್ ಹೋಗುವ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಅವರು ಎದೆಗುಂದುವುದು ಬೇಡ ಎಂದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಹೆಚ್.ವಿಶ್ವನಾಥ್ ಪರ ಸರ್ಕಾರ ಮತ್ತು ಪಕ್ಷ ಇರಲಿದೆ. ಅಡ್ವೊಕೇಟ್ ಜನರಲ್ ಕೂಡ ಸಮರ್ಪಕವಾಗಿ ವಾದಿಸಿದ್ದಾರೆ. ನೋವಿನಿಂದಷ್ಟೇ ವಕೀಲರ ವಿರುದ್ಧ ಅವರು ಕಿಡಿಕಾರಿದ್ದು, ಇನ್ನೆರಡು ದಿನಗಳಲ್ಲಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವೆ ಎಂದು ಹೇಳಿದರು.

ಮತ್ತೋರ್ವ ಸಚಿವ ಕೆ.ಎನ್. ಗೋಪಾಲಯ್ಯ ಮಾತನಾಡಿ, ಹೆಚ್.ವಿಶ್ವನಾಥ್ ಅವರೊಂದಿಗೆ ಸದಾ ಇರುತ್ತೇವೆ. ಯಾರೂ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ, ಸಭೆ ಸೇರಿ ಕಾನೂನು ಹೋರಾಟ ಮುಂದುವರೆಸುವ ಬಗ್ಗೆ ಶೀಘ್ರ ಚರ್ಚಿಸುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.