ಚಾಮರಾಜನಗರ: ವಿದ್ಯುತ್ ತಂತಿ ತಗುಲಿ 5.5 ಎಕರೆಗೂ ಹೆಚ್ಚು ಫಸಲು ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಜಿನ ಸಂತೇಮರಹಳ್ಳಿ ಸಮೀಪದ ಚಂಗಡಿಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗ್ರಾಮದ ಮಲ್ಲು, ಕುಮಾರ್ ಹಾಗೂ ಮಾದೇಗೌಡ ಎಂಬ ಮೂವರು ರೈತರ ಜಮೀನುಗಳಿಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬಾಳೆ ಹಾಗೂ ಕಬ್ಬು ಬೆಂಕಿಗಾಹುತಿಯಾಗಿದ್ದು ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಇದನ್ನು ಓದಿ:ಸೂರ್ಯಕಾಂತಿ ಬೆಳೆದು ಲಕ್ಷ-ಲಕ್ಷ ಆದಾಯ: ಖಾವಿ ಧರಿಸಿದ್ರೂ ಕಾಯಕ ಬಿಡದ ಸ್ವಾಮೀಜಿ