ಚಾಮರಾಜನಗರ : ವಿದ್ಯುತ್ ಪ್ರವಹಿಸಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸವಣ್ಣ(69) ಮೃತ ದುರ್ದೈವಿ. ಹಸುಗಳನ್ನು ಮೇಯಿಸುವ ವೇಳೆ ರಾಸುಗಳು ಬೇರೊಂದು ಜಮೀನಿಗೆ ಮೇಯಲು ನುಗ್ಗಿವೆ. ಆಗ ಬೆಳೆ ಹಾಳಾದೀತು ಎಂದು ಬಸವಣ್ಣ ಹಸುಗಳನ್ನು ದೂರ ಅಟ್ಟಲು ಜಮೀನಿಗೆ ನುಗ್ಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಅಸುನೀಗಿದ್ದಾರೆ ಎನ್ನಲಾಗಿದೆ.
ಹಸುಗಳು ಮೇಯ್ದುಕೊಂಡು ಸಂಜೆ ಮನೆಗೆ ಬಂದರೂ ಬಸವಣ್ಣ ಬರದಿರುವುದರ ಬಗ್ಗೆ ಸಂಬಂಧಿಕರು ತಡಕಾಡಿದ ವೇಳೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.