ETV Bharat / state

ಮಾದಪ್ಪನ ಬೆಟ್ಟದ ವಸತಿಗೃಹದಲ್ಲಿ ಚಿನ್ನದ ಸರ ಬೀಳಿಸಿಕೊಂಡಿದ್ದ ಟೆಕ್ಕಿ ಪತ್ನಿ: ಪ್ರಾಮಾಣಿಕತೆ ಮೆರೆದ ನೌಕರ - Tekki wife lost chian in Madappa Betta

ಮಾದಪ್ಪನ ಬೆಟ್ಟಕ್ಕೆ ದೇವರ ದರ್ಶನಕ್ಕೆ ಎಂದು ಬಂದಿದ್ದ ಟೆಕ್ಕಿ ಕುಟುಂಬ ತಾವು ತಂಗಿದ್ದ ವಸತಿಗೃಹದಿಂದ ಹೋಗುವಾಗ ಮಾಂಗಲ್ಯ ಸರವನ್ನು ಬೀಳಿಸಿಕೊಂಡು ಹೋಗಿದ್ದಾರೆ. ಅಲ್ಲಿನ ನೌಕರ ತಮಗೆ ದೊರೆತ ಮಾಂಗಲ್ಯ ಸರವನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾನಣಿಕತೆ ಮೆರೆದಿದ್ದಾರೆ.

Employee returned Mangalya chain to couple who have lost
ಮಾಂಗಲ್ಯ ಸರ ಕಳೆದುಕೊಂಡ ದಂಪತಿಗೆ ಸರ ಹಿಂತಿರುಗಿಸಿದ ನೌಕರ
author img

By

Published : May 5, 2022, 2:50 PM IST

ಚಾಮರಾಜನಗರ: ರಸ್ತೆಯಲ್ಲಿ 10 ರೂ. ಬಿದ್ದಿದ್ದರೇ ಎಗರಿಸುವ ಈ ದಿನಮಾನದಲ್ಲಿ ಬರೋಬ್ಬರಿ 100 ಗ್ರಾಂ ಚಿನ್ನದ ಸರ ಮರಳಿಸಿ ನೌಕರ ಪ್ರಾಮಾಣಿಕತೆ ಮೆರೆದಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಮೈಸೂರಿನ ಸಾಫ್ಟ್‌ವೇರ್ ಇಂಜಿನಿಯರ್ ಎಂ.ರಾಜಶೇಖರ ಎಂಬವರ ಪತ್ನಿ ಸರವನ್ನು ಮರಳಿ ಪಡೆದಿದ್ದು, ಪ್ರಾಧಿಕಾರದ ನೌಕರ ಕೃಷ್ಣಮೂರ್ತಿ ಮಾಂಗಲ್ಯ ಸರ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಳೆದ 3 ರಂದು ಬೆಟ್ಟಕ್ಕೆ ಬಂದಿದ್ದ ಟೆಕ್ಕಿ ಕುಟುಂಬ ಜೇನುಮಲೆ ವಸತಿಗೃಹದಲ್ಲಿ ತಂಗಿದ್ದರು‌. ದೇವರ ದರ್ಶನ ಮುಗಿಸಿ ಕೊಠಡಿ ಖಾಲಿ ಮಾಡಿ ತೆರಳುವಾಗ ಮಾಂಗಲ್ಯ ಸರ ಬೀಳಿಸಿಕೊಂಡು ಹೋಗಿದ್ದಾರೆ‌‌. ಬಳಿಕ ಸರವು ರಿಸೆಪ್ಶನಿಸ್ಟ್ ಸಿಕ್ಕಿ ಕೊಠಡಿ ಕೊಡುವಾಗ ನೀಡಿದ್ದ ದೂರವಾಣಿ ಸಂಪರ್ಕದಿಂದ ಟೆಕ್ಕಿಯನ್ನು ಪತ್ತೆಹಚ್ಚಿ ಮಾಂಗಲ್ಯ ಸರವನ್ನು ಹಿಂತಿರುಗಿಸಿದ್ದಾರೆ‌.

ಇನ್ನು, ನೌಕರನ ಪ್ರಾಮಾಣಿಕತೆಗೆ ಪ್ರಾಧಿಕಾರದಿಂದ ಶ್ಲಾಘನೆ, ಟೆಕ್ಕಿ ದಂಪತಿಯಿ‌ಂದ ಅಭಿನಂದನೆ ದೊರಕಿದೆ.

ಇದನ್ನೂ ಓದಿ: ಅನುಮಾನಾಸ್ಪದ ಪ್ರಯಾಣಿಕ ಬಿಟ್ಟೋದ ಬ್ಯಾಗ್​ನಲ್ಲಿ ಸಿಕ್ತು ಲ್ಯಾಪ್ ಟಾಪ್- ಮೊಬೈಲ್: ಕರ್ತವ್ಯನಿಷ್ಠೆ ಮೆರೆದ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.