ಕೊಳ್ಳೇಗಾಲ: ವಾಯುಸೇನೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿರುವ ಕೊಳ್ಳೇಗಾಲದ ಆಶ್ರಿತಾ ಒಲೆಟಿ ಅವರ ಮನೆಗೆ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಅಭಿನಂದನೆ ತಿಳಿಸಿ ಸನ್ಮಾನಿಸಿ ಗೌರವಿಸಿದ್ದಾರೆ.
ಪಟ್ಟಣದ ದಕ್ಷಿಣ ಬಡವಾವಣೆಯಲ್ಲಿರುವ ಆಶ್ರಿತಾ ಒಲೆಟಿ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಸಚಿವರು, ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾಗಿರುವುದು ನಾಡಿಗೆ ಹೆಮ್ಮೆಯ ವಿಚಾರವಾಗಿದೆ. ನಿಮ್ಮ ಸಾಧನೆ ಹೀಗೆಯೇ ಮುದುವರೆಯಲಿ. ನಿಮ್ಮಿಂದ ಚಾಮರಾಜನಗರ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಮತಷ್ಟು ಕೀರ್ತಿ ಸಿಗಲಿ ಎಂದು ಹಾರೈಸಿ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಶಾಸಕ ಎನ್.ಮಹೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್ ಇದ್ದರು.