ETV Bharat / state

ಚಾಮರಾಜನಗರದಲ್ಲಿ ಸಕ್ಸಸ್ ಆಯ್ತು ಮಂಡ್ಯ ರಾಗಿ... 30 ದಿನ ಮೊದಲೇ ಕಟಾವು

author img

By

Published : May 29, 2021, 11:07 PM IST

ಬೇರೆ ತಳಿಯ ರಾಗಿ ಗಿಡಗಳಿಂತ ಈ‌ ತಳಿ ಗಿಡ ಎತ್ತರ ಕಡಿಮೆಯಿದ್ದು ರಾಗಿಯ ತೆನೆ ಮುದುಡಿಕೊಂಡೇ ಬೆಳೆಯುವುದರಿಂದ ಗಾಳಿ-ಮಳೆಯಿಂದ ರಕ್ಷಿಸಿಕೊಳ್ಳುವ ಗುಣ ಹೊಂದಿದೆ‌‌. ಮುಖ್ಯವಾಗಿ 30 ದಿನಗಳ ಮುಂಚೆಯೇ ಕಟಾವಿಗೆ ಬರಲಿರುವುದರಿಂದ ಬೇರೆ ಬೆಳೆಗಳಿಗೆ ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಗಲಿದೆ, ಒಂದು ತಿಂಗಳ ಮುಂಚಿತವಾಗಿಯೇ ರೈತರು ಹಣವನ್ನೂ ಗಳಿಸಬಹುದಾಗಿದೆ.

ಕಟಾವು
ಕಟಾವು

ಚಾಮರಾಜನಗರ: ಬೆಂಕಿ ರೋಗ, ಕಾಂಡ ಕೊರಕಲು ಹುಳುವಿನ‌ ಬಾಧೆ, ಮಳೆ ಬಂದಾಗ ಕಾಳು ಉದುರಿ ಆಗುತ್ತಿದ್ದ ಬೆಳೆ ನಷ್ಟಕ್ಕೆಲ್ಲಾ ಮಂಡ್ಯ ರಾಗಿ ಪರಿಹಾರವಾಗಿದೆ. ಜೊತೆಗೆ, ಒಂದು ತಿಂಗಳು ಮುಂಚಿತವಾಗಿಯೇ ಬೆಳೆ ಕಟಾವಿಗೆ ಬಂದಿದೆ.

ಹೌದು..‌, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ಸುನೀಲ್ ಹಾಗೂ ಯೋಗಿಶ್ ಎಂಬಿಬ್ಬರು ವಿಜ್ಞಾನಿಗಳು KMR-630 ಎಂಬ ರಾಗಿಯನ್ನು ಜಿಲ್ಲೆಯಲ್ಲಿ 10 ಎಕರೆಗೆ ಬಿತ್ತನೆ ಮಾಡಿಸಿದ್ದು ಫಲಪ್ರದವಾಗಿದ್ದು ಮಂಡ್ಯ ರಾಗಿ ಸಕ್ಸಸ್ ಕಂಡಿದೆ.

ಜಿಲ್ಲೆಯಲ್ಲಿ ಈ ಹಿಂದೆ ಬೆಳೆಯುತ್ತಿದ್ದ ರಾಗಿಯು 115-120 ದಿನಗಳಲ್ಲಿ ಕಟಾವಿಗೆ ಬರುತ್ತಿದ್ದವು.‌ ಆದರೆ, KMR-630 ತಳಿಯು 90 ದಿನಗಳಲ್ಲೇ ಕಟಾವಿಗೆ ಬರಲಿದ್ದು ರಾಗಿಗೆ ಸಾಮಾನ್ಯವಾಗಿ ಬಾಧಿಸುವ ಬೆಂಕಿ ರೋಗ, ಕಾಂಡ‌ಕೊರಕಲು ಹುಳುವಿನಿಂದ ರಕ್ಷಿಸಿಕೊಳ್ಳುವ ನಿರೋಧಕ ಶಕ್ತಿ ಹೊಂದಿದೆ. ರಾಗಿಯ ಇಳ್ಕುಗಳು ಈ ತಳಿಯಲ್ಲಿ 8-11 ಇರಲಿದ್ದು ಇಳುವರಿ ದೃಷ್ಟಿಯಿಂದಲೂ ಧನಾತ್ಮಕ ಫಲಿತಾಂಶ ಜಿಲ್ಲೆಯಲ್ಲಿ ಬಂದಿರುವುದಾಗಿ‌ ಕೃಷಿ ವಿಜ್ಞಾನಿಗಳಾದ ಸುನೀಲ್ ಹಾಗೂ ಯೋಗೀಶ್ ಈಟಿವಿ ಭಾರತಕ್ಕೆ ತಿಳಿಸಿದರು.

ಚಾಮರಾಜನಗರದಲ್ಲಿ ಸಕ್ಸಸ್ ಆಯ್ತು ಮಂಡ್ಯ ರಾಗಿ

ಗುಂಡ್ಲುಪೇಟೆ ಮಳೆಯಾಶ್ರಿತ ಜಮೀನುಗಳಲ್ಲಿ ಮತ್ತು ಯಳಂದೂರು ತಾಲೂಕಿನಲ್ಲಿ ನೀರಾವರಿ ಭೂಮಿಯಲ್ಲೆರಡರಲ್ಲೂ KMR-630 ಸಕ್ಸಸ್ ಆಗಿದ್ದು ಕೆಲವೇ ತಿಂಗಳುಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲು ಕೆವಿಕೆ ವಿಜ್ಞಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.