ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಿಂದ ಪದವಿ ಕಾಲೇಜನ್ನು ಸ್ಥಳಾಂತರವಾಗಿಸಿದ್ದ ಆದೇಶ ರದ್ದು ಮಾಡಿ, ಕಾಲೇಜನ್ನು ಉಳಿಸಿಕೊಡಿ ಎಂದು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರೈತ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಮೌರ್ಯ ವೃತ್ತದಿಂದ ಗೃಹ ಕಚೇರಿ ಕೃಷ್ಣ ವರೆಗೆ ವಿದ್ಯಾರ್ಥಿಗಳು ಹಾಗೂ ರೈತ ಮುಖಂಡರು ಪಾದಯಾತ್ರೆ ನಡೆಸಿದರು, ಬಳಿಕ ಮುಖ್ಯಮಂತ್ರಿ ಬೇಟಿ ಮಾಡಿ ವಾಸ್ತವಿಕ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ.ಈ ಕಾಲೇಜಿನಲ್ಲಿ ಹೆಚ್ಚಾಗಿ ಹೆಣ್ಣು ಮಕ್ಕಳು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ, ಕಾಲೇಜು ಸ್ಥಳಾಂತರಗೊಂಡರೆ ಅನೇಕ ವಿದ್ಯಾರ್ಥಿನಿಯರು ವ್ಯಾಸಂಗ ಮೊಟಕು ಗೊಳಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳ ಅವಲತ್ತುಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಾಂತಮಲ್ಲಪ್ಪ, ಮಹದೇವಪ್ಪ, ಮಹೇಶ್ ಪ್ರಭು, ವಿದ್ಯಾರ್ಥಿಗಳಾದ ಕಾವ್ಯ , ತೇಜಸ್ವಿ ಚಮನದನ ಮೊದಲಾದ ವಿದ್ಯಾರ್ಥಿಗಳು ಇದ್ದರು.