ಚಾಮರಾಜನಗರ : ಮುಂದಿನ ಸಿಎಂ ಹೆಚ್‌ಡಿಕೆ ಎಂದು ಭವಿಷ್ಯ ನುಡಿದಿರುವ ವಿನಯ್ ಗುರೂಜಿ ಅವರ ಮಾತಿಗೆ ಪ್ರತಿಕ್ರಿಯಿಸಿ ನಮಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಮಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ ಎಂದು ಹೆಚ್‌ಡಿಕೆ ಸಿಎಂ ಆಗುವುದಿಲ್ಲ ಎಂದು ಪರೋಕ್ಷವಾಗಿ ಕುಟುಕಿದರು. ಇಡೀ ರಾಜ್ಯಕ್ಕೆ ಡಿಕೆಶಿ ದುಡ್ಡು ಕೊಡಲಿ ಎಂದಿದ್ದ ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾರಾಯಣಗೌಡ ಅವರಿಗೆ ನಾಚಿಕೆ ಆಗಬೇಕು. ಸತ್ತವರ ಕುಟುಂಬಗಳಿಗೆ ಸಾಂತ್ವನ ಹೇಳದೆ, ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ, ಅವರ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ದಲಿತ ಸಿಎಂ ಪ್ರಸ್ತಾಪ ಆಗುತ್ತಿರುವ ಬಗ್ಗೆ ಮಾತನಾಡಿ, ದಲಿತ ಸಿಎಂ ಎನ್ನುವುದು ಈಗ ಅಪ್ರಸ್ತುತ ವಿಚಾರ, ಚುನಾವಣೆಯಾದ ಬಳಿಕ ಚರ್ಚೆಗೆ ಬರಬೇಕು, ಈಗಲ್ಲ. ಡಿಕೆಶಿ ಅವರು ಸಂಘಟನೆಯಲ್ಲಿ ಚತುರರಿದ್ದು, ಕಾಂಗ್ರಸ್ ಅಲೆ ಕಾಣುತ್ತಿದ್ದೇವೆ, ಸಿದ್ದರಾಮಯ್ಯ-ಡಿಕೆಶಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದಾರೆ. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರ ಪರವಾಗಿ ಶುಭಾಶಯ ಕೋರುತ್ತೇನೆ. ಕೊರೊನಾ ಸಂಕಷ್ಟದ ಹೊತ್ತಿನಲ್ಲಿ ಜನರ ಜೊತೆ ಕಾಂಗ್ರೆಸ್ ಕಾರ್ಯಕರ್ತರು ನಿಂತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಮುಂದಿನ ಸಿಎಂ ಹೆಚ್‌ಡಿಕೆ, ನಿಖಿಲ್ಗೂ ಶಾಸಕರಾಗುವ ಯೋಗ : ಭವಿಷ್ಯ ನುಡಿದ ವಿನಯ್ ಗುರೂಜಿ