ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಭೀಮನ ಅಮವಾಸ್ಯೆಗೆ ಅಚರಣೆಗೆ ಅಪಾರ ಭಕ್ತ ಸಮೂಹ ನೆರೆದಿತ್ತು. ಈ ಸಂದರ್ಭದಲ್ಲಿ ರಾಜಗೋಪುರದ ಬಳಿ ವಿಶೇಷ ದರ್ಶನ ಕೌಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರನೊಬ್ಬ ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್ನ ಜೊತೆಗೆ 2.91 ಲಕ್ಷ ರೂ ಹಣವನ್ನೂ ಭಕ್ತನೋರ್ವನಿಗೆ ಒಪ್ಪಿಸಿದ್ದಾನೆ.
ಈ ನೌಕರ ಭಕ್ತರಿಗೆ ವಿಶೇಷ ದರ ಟಿಕೇಟ್ ನೀಡಿ ಲಾಡು ಪ್ರಸಾದ ನೀಡಿದ್ದಾನೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನೂ ಸಹ ಇಟ್ಟಿದ್ದ ಕಾರಣ ಹಣಸಹಿತ ಬ್ಯಾಗ್ ಅನ್ನು ಭಕ್ತನೋರ್ವನಿಗೆ ನೀಡಿ ಎಡವಟ್ಟು ಮಾಡಿದ್ದಾನೆ. ಇದಾದ ಬಹಳ ಹೊತ್ತಿನ ಬಳಿಕ ಹಣ ಕಾಣಿಸದಿದ್ದರಿಂದ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿಯ ಕಣ್ತಪ್ಪಿನಿಂದ ದುಡ್ಡು ಲಾಡು ಜೊತೆ ಹೋಗಿರುವುದು ಗೊತ್ತಾಗಿದೆ.
ಪ್ರಾಧಿಕಾರದ ಬೊಕ್ಕಸಕ್ಕೆ 2.91 ರೂ ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 28 ದಿನ, ಹುಂಡಿಯಲ್ಲಿ ಕೋಟಿ-ಕೋಟಿ ಹಣ.. ಮಲೆ ಮಹದೇಶ್ವರನಿಗೆ ಕಾಣಿಕೆ ಭರಪೂರ