ETV Bharat / state

ಕ್ಷುಲ್ಲಕ ವಿಚಾರಕ್ಕೆ ಇಬ್ಬರಿಗೆ ಚಾಕುವಿನಿಂದ ಹಲ್ಲೆಗೈದ ಸ್ನೇಹಿತರು.. ಓವ೯ ಅಂದರ್​​, ಮತ್ತೋರ್ವ ಪರಾರಿ! - ಕೊಳ್ಳೇಗಾಲ ಲೇಟೆಸ್ಟ್ ನ್ಯೂಸ್

ಚಾಕು ಇರಿತಕ್ಕೊಳಗಾದ ಸಿದ್ದರಾಜನಾಯ್ಕ ಮತ್ತು ಮಹೇಶ್ ಇಬ್ಬರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ..

Stab by a knife on 2 people in kollegala !
ಕ್ಷುಲಕ ವಿಚಾರಕ್ಕೆ ಇಬ್ಬರಿಗೆ ಚಾಕುವಿನಿಂದ ಇರಿತ
author img

By

Published : Apr 28, 2021, 11:53 AM IST

ಕೊಳ್ಳೇಗಾಲ : ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಿಂದ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಜೊತೆ ಸೇರಿ ಇಬ್ಬರಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಪಾಳ್ಯ ಗ್ರಾಮದ ಸಿದ್ದರಾಜ‌ನಾಯ್ಕ, ಮಹೇಶ್ ಎಂಬುವರು ಹಲ್ಲೆಗೊಳಗಾದವರು. ಕುಮಾರ್ ಅಲಿಯಾಸ್ ಕೊಂಗರಹಳ್ಳಿ ಹಾಗೂ ಗೋವಿಂದ ಎಂಬುವರೇ ಹಲ್ಲೆ ಮಾಡಿರುವ ಆರೋಪಿಗಳು.

ಘಟನೆ : ಏ. 27ರಂದು ಸಿದ್ದರಾಜನಾಯ್ಕ ಆತನ ಸ್ನೇಹಿತ ಮಹೇಶ್ ಜೊತೆ ಸಮೀಪದ‌ ಕಾವೇರಿ ನದಿಗೆ ಈಜಲು ತೆರಳಿದ್ದಾರೆ. ಈ ವೇಳೆ ಕಾವೇರಿ ನದಿಯಲ್ಲಿ ಕುಮಾರ್ ಅಲಿಯಾಸ್ ಕೊಂಗರಹಳ್ಳಿ ಹಾಗೂ ಸಿದ್ದರಾಜ‌ನಾಯ್ಕ, ಮಹೇಶ್ ಅವರ ನಡುವೆ ಜಗಳವಾಗಿದೆ.

ಇಷ್ಟಕ್ಕೆ ಸುಮ್ಮನಿರದ ಕುಮಾರ್, ಗ್ರಾಮಕ್ಕೆ ಬಂದ ಕೂಡಲೇ ತನ್ನ‌ ಸ್ನೇಹಿತನಾದ ಗೊಂವಿಂದನೊಂದಿಗೆ ಸೇರಿ, ಗ್ರಾಮದ ಹೈಸ್ಕೂಲ್ ಬಳಿ ನಿಂತಿದ್ದ ಸಿದ್ದರಾಜನಾಯ್ಕ ಮತ್ತು ಮಹೇಶ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ‌ ಮಾಡಿದ್ದಾನೆ.

ಓರ್ವ ಅಂದರ್​ ಮತ್ತೋರ್ವ ಪರಾರಿ! : ಚಾಕು ಇರಿತಕ್ಕೊಳಗಾದ ಸಿದ್ದರಾಜನಾಯ್ಕ ಮತ್ತು ಮಹೇಶ್ ಇಬ್ಬರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ‌‌ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದಂತೆ ಆರೋಪಿ ಗೋವಿಂದನನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಕುಮಾರ್ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಥಳಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.