ETV Bharat / state

ಕೊರೊನಾ ನಿಯಂತ್ರಣದಲ್ಲಿದೆ, ಲಾಕ್​ಡೌನ್​ ಆಗಲ್ಲ: ಸಚಿವ ಸೋಮಶೇಖರ್

ಕೊರೊನಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿನ ಕೋವಿಡ್ ಉಸ್ತುವಾರಿ ನೀಡಿದ್ದು ಡಿಸಿ, ಅಧಿಕಾರಿಗಳ ಸಭೆ ನಡೆಸಿ ಸಿಎಂ ಬೊಮ್ಮಾಯಿ ಅವರಿಗೆ ಇನ್ನೆರಡು ದಿನದಲ್ಲಿ ಜಿಲ್ಲೆಯ ಪರಿಸ್ಥಿತಿ ವರದಿ ಕೊಡುತ್ತೇನೆ ಎಂದು ಸಚಿವ ಎಸ್‌.ಟಿ‌.ಸೋಮಶೇಖರ್ ಹೇಳಿದರು.

st-somashekahar
ಸಚಿವ ಎಸ್‌.ಟಿ‌.ಸೋಮಶೇಖರ್
author img

By

Published : Aug 6, 2021, 1:11 PM IST

ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮತ್ತೆ ಲಾಕ್​ಡೌನ್​ ಆಗಲ್ಲ ಎಂದು ಸಚಿವ ಎಸ್‌.ಟಿ‌.ಸೋಮಶೇಖರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸಿ ತಾಣಗಳಲ್ಲಿ ಜನಸಂದಣಿಯಾಗುತ್ತಿದೆ ಎಂಬ ಮಾಹಿತಿ ಬರುತ್ತಿದೆ. ಕೋವಿಡ್ ರೂಲ್ಸ್ ಅನ್ನು ಪ್ರತಿಯೊಬ್ಬರೂ ಫಾಲೋ ಮಾಡಬೇಕು. ನನಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿನ ಕೋವಿಡ್ ಉಸ್ತುವಾರಿ ನೀಡಲಾಗಿದೆ. ಡಿಸಿ, ಅಧಿಕಾರಿಗಳ ಸಭೆ ನಡೆಸಿ ಸಿಎಂ ಬೊಮ್ಮಾಯಿ ಅವರಿಗೆ ಇನ್ನೆರಡು ದಿನದಲ್ಲಿ ಜಿಲ್ಲೆಯ ಪರಿಸ್ಥಿತಿ ವರದಿ ಕೊಡುತ್ತೇನೆ ಎಂದು ತಿಳಿಸಿದರು.

ಶಾಸಕ ಎನ್‌.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿರುವ ಕುರಿತು ಮಾತನಾಡಿ, ಅವರಲ್ಲಿ ಸಾಕಷ್ಟು ವಿಚಾರವಂತಿಕೆ ಇದೆ. ಸದನದಲ್ಲಿ ಅವರು ಮಂಡಿಸುವ ವಿಚಾರಗಳು ಮಹತ್ವದ್ದಾಗಿರುತ್ತದೆ. ಈ ಬುದ್ಧಿವಂತಿಕೆಯನ್ನು ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅವರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಂಸದ ಶ್ರೀನಿವಾಸ್​ ಪ್ರಸಾದ್ ರಾಜಕೀಯಕ್ಕೆ ವಿದಾಯ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿ, ಅವರು ಅತ್ಯಂತ ಹಿರಿಯರು. ಅನುಭವಿಗಳು ರಾಜಕೀಯದಲ್ಲಿ 50 ವರ್ಷ ಪೂರೈಸಿದ್ದು ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಇಂದು ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವಯಸ್ಸಿನ ಕಾರಣಕ್ಕೆ ವಿದಾಯ ಹೇಳಿದ್ದಾರೆ. ಅವರು ನೀಡಿರುವ ಸಹಕಾರದ ಋಣವನ್ನು ಎಂದು ಮರೆಯುವುದಿಲ್ಲ ಎಂದರು‌.

ರವಿ ಡಿ ಚೆನ್ನಣ್ಣವರ್ ಬಿಜೆಪಿಗೆ ಬರುತ್ತಾರೆಯೇ ಎಂಬ ಕುರಿತು ಹೇಳಿಕೆ ನೀಡಿದ ಅವರು ಯಾರೂ ಬೇಕಾದರೂ ಪಕ್ಷದ ಸಿದ್ಧಾಂತ, ತತ್ವ ಒಪ್ಪಿ ಪಾರ್ಟಿಗೆ ಬರಬಹುದು. ಬಂದರೆ ಸ್ವಾಗತ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.