ಚಾಮರಾಜನಗರ: ಆಗಸ್ಟ್ 10ರ ಸುಮಾರಿಗೆ ಎಸ್ಎಸ್ಎಲ್ಸಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಇದೇ ಸೋಮವಾರ ಇಲ್ಲವೇ ಮಂಗಳವಾರ ಟಾಸ್ಕ್ ಫೋರ್ಸ್ ಸಮಿತಿ ವರದಿ ನೀಡಲಿದ್ದು ಅದನ್ನಾಧರಿಸಿ ಫಲಿತಾಂಶ ಪ್ರಕಟಿಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.
ಖಾಸಗಿ ಶಾಲೆಗಳ ಕಳಕಳಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದ ಅವರು, 25 ರ ಬಳಿಕ ಏನೇನು ಬೆಳವಣಿಗೆಗಳು ನಡೆಯಲಿದೆ ನೋಡೋಣ. ರಾಜ್ಯ ಮಟ್ಟದಲ್ಲಂತೂ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೇಂದ್ರ ನಾಯಕರ ಸೂಚನೆಯಂತೆ ನಡೆದುಕೊಳ್ಳುವುದಾಗಿ ಸಿಎಂ ಈಗಾಗಲೇ ತಿಳಿಸಿದ್ದಾರೆ ನೋಡೋಣ ಎಂದಷ್ಟೇ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.