ETV Bharat / state

SSLCಯಲ್ಲಿ ಗಡಿಜಿಲ್ಲೆ ಮಕ್ಕಳ ಸಾಧನೆ, 15ನೇ ಸ್ಥಾನಕ್ಕೇರಿದ ಚಾಮರಾಜನಗರ - ಟಾಪರ್

ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಶೇ.80.58 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಕಳೆದ ಬಾರಿ ಶೇ.74.46 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ 24 ನೇ ಸ್ಥಾನ ಪಡೆದ ಜಿಲ್ಲೆ, ಈ ಸಲ 9 ಸ್ಥಾನಗಳಷ್ಟು ಮುಂದೆ ಬಂದಿದೆ.

ಜಿಲ್ಲೆಯ ಟಾಪರ್ಸ್​ಗಳಿವರು
author img

By

Published : Apr 30, 2019, 8:26 PM IST

ಚಾಮರಾಜನಗರ: ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಜಿಲ್ಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಒಟ್ಟು 625ಕ್ಕೆ 618 ಅಂಕ ಪಡೆದ ಗುಂಡ್ಲುಪೇಟೆಯ ಎಂ.ಸ್ಪೂರ್ತಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಹನೂರು ಕ್ರಿಸ್ತರಾಜ ಶಾಲೆಯ ಯಶಸ್ವಿನಿ-616 ಅಂಕ, ನಗರದ ಸೇವಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಿಯಾದರ್ಶಿನಿ ಮತ್ತು ಹನೂರಿನ ವಿವೇಕಾನಂದ ಪ್ರೌಢಶಾಲೆಯ ಅರ್ಬಿಯಾ ಸಲೀಂ- 613 ಅಂಕ, ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀನಿವಾಸ ಪ್ರಸಾದ್- 611 ಅಂಕ ಗಳಿಸಿ ಕ್ರಮವಾಗಿ ಜಿಲ್ಲೆಗೆ 2, 3, 4ನೇ ಸ್ಥಾನ ಪಡೆದಿದ್ದಾರೆ.

ಎರಡನೇ ಸ್ಥಾನ ಪಡೆದ ಹನೂರಿನ ಕ್ರಿಸ್ತರಾಜ ಪ್ರೌಢಶಾಲೆಯ ಯಶಸ್ವಿನಿ ತಂದೆ ಕಾಮಗೆರೆ ಗ್ರಾಮದ ಕೆ.ಎಸ್.ರಾಜುಗೌಡ ಜೀವನೋಪಾಯಕ್ಕಾಗಿ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದಾರೆ.

613 ಅಂಕ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದ ಹನೂರಿನ ವಿವೇಕಾನಂದ ಶಾಲೆಯ ಅರ್ಬಿಯಾ ಸಲೀಂ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ವೈದ್ಯರಾದ ಅಥಿಯಾ ಫೈರೋಜ್ ಮತ್ತು ಸಲೀಂ ಪಾಷ ದಂಪತಿ ಪುತ್ರಿಯಾಗಿದ್ದಾರೆ.

ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀನಿವಾಸ ಪ್ರಸಾದ್ 611 ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದು, ಇವರ ತಂದೆ ಕುದೇರಿನಲ್ಲಿರುವ ಚಾಮುಲ್ ಘಟಕದಲ್ಲಿ ನೌಕರರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.

ಫಲಿತಾಂಶ ಪಟ್ಟಿಯಲ್ಲಿ 15 ನೇ ಸ್ಥಾನಕ್ಕೇರಿದ ಜಿಲ್ಲೆ:

ಈ ಬಾರಿಯ ಫಲಿತಾಂಶದಲ್ಲಿ ಮಹತ್ವದ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳು ಗಡಿಜಿಲ್ಲೆಯನ್ನು 15 ನೇ ಸ್ಥಾನಕ್ಕೇರಿಸಿದ್ದಾರೆ. ಈ ಬಾರಿ ಪರೀಕ್ಷೆ ಬರೆದ

ಶೇ.80.58 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನಲ್ಲಿ ಶೇ.74.46 ರಷ್ಟು ಫಲಿತಾಂಶ ಪಡೆದು ಜಿಲ್ಲೆ ರಾಜ್ಯಕ್ಕೆ 24 ನೇ ಸ್ಥಾನ ಪಡೆದಿತ್ತು. ಈ ಬಾರಿ 9 ಸ್ಥಾನಗಳಷ್ಟು ಮುಂದೆ ಬಂದಿದೆ.

ಪಿಯು ಫಲಿತಾಂಶದಲ್ಲಿ 6 ಸ್ಥಾನಗಳಷ್ಟು ಕುಸಿದಿದ್ದ ಗಡಿಜಿಲ್ಲೆ ಎಸ್​ಎಸ್​ಎಲ್​ಸಿಯಲ್ಲಿ ಪ್ರಗತಿ ತೋರಿಸಿದೆ.

Intro:ರೈತನ ಮಗಳು, ಪಂಚರ್ ಷಾಪಿನ ಹುಡುಗಿ, ಡಾಕ್ಟರ್ ಪುತ್ರಿ ಚಾಮರಾಜನಗರ ಜಿಲ್ಲೆ ಟಾಪರ್ಸ್

ಚಾಮರಾಜನಗರ: ಕಳೆದ ಬಾರಿಗಿಂತ ಗಣನೀಯ ಸಾಧನೆ ಮಾಡಿರುವ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ೬೨೫ಕ್ಕೆ ೬೧೮ ಅಂಕ ಪಡೆದ ಗುಂಡ್ಲುಪೇಟೆಯ ಎಂ.ಸ್ಪೂರ್ತಿ ಜಿಲ್ಲೆಯ ಟಾಪರ್ ಆಗಿದ್ದಾರೆ.

Body:ಹನೂರು ಕ್ರಿಸ್ತರಾಜ ಶಾಲೆಯ ಯಶಸ್ವಿನಿ ೬೧೬ ಅಂಕ, ನಗರದ ಸೇವಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಿಯಾದರ್ಶಿನಿ ಮತ್ತು ಹನೂರಿನ ವಿವೇಕಾನಂದ ಪ್ರೌಢಶಾಲೆಯ ಅರ್ಬಿಯಾ ಸಲೀಂ ೬೧೩ ಅಂಕ, ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀನಿವಾಸಪ್ರಸಾದ್ ೬೧೧ ಅಂಕ ಗಳಿಸಿ ಕ್ರಮವಾಗಿ ೨,೩, ೪ ನೇ ಸ್ಥಾನ ಪಡೆದಿದ್ದಾರೆ.

ಗುಂಡ್ಲುಪೇಟೆಯ ಸೇಂಟ್ ಜಾನ್ಸ್ ಶಾಲೆಯ ಸ್ಪೂರ್ತಿ ಚಿಕ್ಕತುಪ್ಪೂರು ಗ್ರಾಮದ ಮಹೇಶ್ ಮತ್ತು ಪುಟ್ಟಮ್ಮ ಮಗಳಾಗಿದ್ದು ರೈತ ಕುಟುಂಬದಿಂದ ಬಂದಿದ್ದಾರೆ. ಟ್ಯೂಷನ್ ಗೆ ತೆರಳದೇ ನಿತ್ಯ ಬೆಳಗ್ಗೆ- ಸಂಜೆ ಎರಡು ಗಂಟೆ ಅಭ್ಯಾಸ ಮಾಡಿ ಗಡಿಜಿಲ್ಲೆಯ ಟಾಪರ್ ಎನಿಸಿಕೊಂಡಿದ್ದಾರೆ.

ಎರಡನೇ ಸ್ಥಾನ ಪಡೆದ ಹನೂರಿನ ಕ್ರಿಸ್ತರಾಜ ಪ್ರೌಢಶಾಲೆಯ ಯಶಸ್ವಿನಿ ತಂದೆ ಕಾಮಗೆರೆ ಗ್ರಾಮದ ಕೆ.ಎಸ್.ರಾಜುಗೌಡ ಜೀವನೋಪಾಯಕ್ಕಾಗಿ ಪಂಕ್ಚರ್ ಷಾಪ್ ಇಟ್ಟುಕೊಂಡಿದ್ದಾರೆ.

೬೧೩ ಅಂಕ ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಪಡೆದ
ಹನೂರಿನ ವಿವೇಕಾನಂದ ಶಾಲೆಯ ಅರ್ಬಿಯಾ ಸಲೀಮ್ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ವೈದ್ಯರಾದ ಅಥಿಯಾ ಫೈರೋಜ್ ಮತ್ತು ಸಲೀಂ ಪಾಷ ದಂಪತಿ ಪುತ್ರಿಯಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿನಿ ೬೧೩ ಅಂಕ ಪಡೆದಿರುವ ವಿದ್ಯಾರ್ಥಿನಿ ತಂದೆ ಉದ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊಳ್ಳೇಗಾಲದ ನಿಸರ್ಗ ವಿದ್ಯಾನಿಕೇತನ ಶಾಲೆಯ ಶ್ರೀನಿವಾಸಪ್ರಸಾದ್ ೬೧೧ ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದಿದ್ದು ಇವರ ತಂದೆ ಕುದೇರಿನಲ್ಲಿರುವ ಚಾಮುಲ್ ಘಟಕದಲ್ಲಿ ನೌಕರರಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ.

ಜಿಲ್ಲೆಯ ಮೊದಲ ನಾಲ್ಕು ಮಂದಿಯೂ ಬಾಲಕಿಯರೇ ಆಗಿದ್ದು ವಿದ್ಯೆಗೆ ಬಡತನ, ಅಂತಸ್ತು ಅಡ್ಡಿಯಾಗಲ್ಲ ಎಂದು ಸಾರಿದ್ದಾರೆ

೧೫ ನೇ ಸ್ಥಾನಕ್ಕೇರಿದ ಜಿಲ್ಲೆ:
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಗಣನೀಯವಾದ ಸಾಧನೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಮಾಡಿದ್ದು ಈ ಬಾರಿ ಗಡಿಜಿಲ್ಲೆ ೧೫ನೇ ಸ್ಥಾನಕ್ಕೇರಿದೆ.

ಶೇ.೮೦.೫೮ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನಲ್ಲಿ ಶೇ.೭೪.೪೬ ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ೨೪ ನೇ ಸ್ಥಾನ ಪಡೆದಿತ್ತು. ಈ ಬಾರಿ ೯ ಸ್ಥಾನಗಳನ್ನು ಜಿಗಿದಿದೆ.

Conclusion:ಇನ್ನು, ಪಿಯು ಫಲಿತಾಂಶದಲ್ಲಿ ೬ ಸ್ಥಾನ ಕುಸಿದಿದ್ದ ಗಡಿಜಿಲ್ಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಏರಿಕೆ ಕಂಡಿರುವುದು ಪಿಯು ಸಿಯಲ್ಲಿ ಹೋದ ಮಾನ ಎಸ್ ಎಸ್ ಎಲ್ ಸಿಯಲ್ಲಿ ಬಂದಂತಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.