ಕೊಳ್ಳೇಗಾಲ: ಭಾನುವಾರ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದಿರುವುದರಿಂದ ಜೊತೆಗೆ ರಂಜಾನ್ ಹಬ್ಬದ ಪೂರಕ ತಯಾರಿ ಹಿನ್ನೆಲೆ ಇಂದು ಸಾಮಾಜಿಕ ಅಂತರವಿಲ್ಲದೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.
ನಾಳೆ ಸಂಪೂರ್ಣ ಬಂದ್ ಘೋಷಿಸಿರುವ ಕಾರಣ ರಂಜಾನ್ ಹಬ್ಬದ ಸಡಗರದಲ್ಲಿರುವವರು ಬಟ್ಟೆ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿ ಆಗಿದ್ದರು. ಬಹುತೇಕ ಮಂದಿ ಮಾಸ್ಕ್ ಧರಿಸುವ ಗೋಜಿಗೆ ಹೋಗದೆ ಸಾಮಾಜಿಕ ಅಂತರ ನಿಯಮವನ್ನು ಗಾಳಿಗೆ ತೂರಿರುವ ದೃಶ್ಯಗಳು ಕಂಡು ಬಂದವು. ನಿಯಮ ಪಾಲಿಸದೆ ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ತೆರಳುವುದು ಸಾಮಾನ್ಯವಾಗಿದೆ. ಸ್ಥಳೀಯ ನಗರಸಭೆ ಹಾಗೂ ಪೊಲೀಸ್ ಇಲಾಖೆ ಅದೆಷ್ಟೇ ದಂಡ ವಿಧಿಸಿದರೂ ಕ್ಯಾರೇ ಎನ್ನದ ಜನತೆ, ಸರ್ಕಾರದ ಆದೇಶವನ್ನು ಗಾಳಿಗೆ ತೂರುತ್ತಿದ್ದಾರೆ.