ಚಾಮರಾಜನಗರ :ಸರ್ಕಾರ ನೌಕರರ ಪರವಾಗಿ ಸರ್ಕಾರ ಇದೆ, ಬುದ್ಧಿವಂತ ಸರ್ಕಾರಿ ನೌಕರರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಂದು ಬಿಜೆಪಿ ರಥಯಾತ್ರೆ ಚಾಲನೆ ಕಾರ್ಯಕ್ರಮಕ್ಕೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮುನ್ನ ತಾಳಬೆಟ್ಟದಲ್ಲಿ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
7 ನೇ ವೇತನ ಆಯೋಗ ಜಾರಿ ಸಂಬಂಧ ಮಧ್ಯಂತರ ವರದಿ ಬಂದ ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಅವಧಿಯಲ್ಲೇ ಸರ್ಕಾರಿ ನೌಕರರಿಗೆ ಎಲ್ಲಾ ಬೆನಿಫಿಟ್ ಕೂಡ ಸಿಕ್ಕಿದ್ದು, ನೌಕರ ಜೊತೆ ಸಿಎಂ ಮಾತನಾಡುತ್ತಿದ್ದಾರೆ. ಎರಡು ವರ್ಷಗಳು ಕೊರೊನಾ ಇತ್ತು ಎಂಬುದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ನಮಗೇನು ಹೆದರಿಕೆ ಇಲ್ಲಾ : ಜೆಡಿಎಸ್, ಕಾಂಗ್ರೆಸ್ನ ಯಾತ್ರೆಗಳಿಂದ ಬಿಜೆಪಿಗೇನೂ ಭಯವಾಗಿಲ್ಲ, ಅವರುಗಳಿಗೆ ಭಯವಾಗಿರಬೇಕಷ್ಟೇ. ಚುನಾವಣೆಯ ಸಮಯದಲ್ಲಿ ನಾವು ಜನರ ಬಳಿ ಮತ ಯಾಚಿಸುತ್ತಿದ್ದೇವೆ. ನಾವು ಯಾವಾಗಲೂ ಜನರ ಬಳಿ ಇದ್ದವರು, ಸಾಧನೆ ಹೇಳಲು ಈ ಯಾತ್ರೆ ಎಂದು ತಿಳಿಸಿದರು. ಕಾಂಗ್ರೆಸ್ನ ಕಾರ್ಯಕರ್ತರ ವಿಶ್ವಾಸ ವೃದ್ಧಿಸುವ ಸಲುವಾಗಿ ಡಿ.ಕೆ. ಶಿವಕುಮಾರ್ 141 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ ಅಷ್ಟೇ, ನಮ್ಮದು ಡಬಲ್ ಎಂಜಿನ್ ಸರ್ಕಾರ, ಜನರ ಆಶೋತ್ತರಕ್ಕೆ ಸ್ಪಂದಿಸುವ ಸರ್ಕಾರ ಎಂದು ಸಮರ್ಥಿಸಿಕೊಂಡರು.
ಕುಮಾರಸ್ವಾಮಿಗೆ 30 ಸೀಟ್ ಬಂದ್ರೆ ಸಾಕು :ಇನ್ನೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿರುದ್ದ ಟೀಕೆ ಮಾಡಿದರು. ಕುಮಾರಸ್ವಾಮಿ ಅವರು ಓಡಾಡುತ್ತಿರುವುದು 120 ಸ್ಥಾನಕ್ಕಲ್ಲ, 30 ಸ್ಥಾನಕ್ಕಾಗಿ, ಅವರಿಗೇ 20- 30 ಬಂದರೆ ಸಾಕು, ಸಿಎಂ ಆಗುತ್ತೇನೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ :ಇಂದಿನಿಂದ ಕಮಲಪಡೆ ರಥಯಾತ್ರೆ: ಮಾದಪ್ಪನ ಬೆಟ್ಟದ ಜನರ ಸಮಸ್ಯೆಗೆ ನಡ್ಡಾ ಕೊಡ್ತಾರಾ ಮುಕ್ತಿ?