ETV Bharat / state

ಮಾಯ್ಕಾರ ಮಾದಪ್ಪನಿಗಾಗಿ ಬೆಳ್ಳಿರಥ ತಯಾರಿ: ಬೇಕಿದೆ 450 ಕೆಜಿ ಬೆಳ್ಳಿ - Silver chariot for Malemahadeshwara

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಮಾದಪ್ಪನಿಗೆ ಬೆಳ್ಳಿರಥ ನಿರ್ಮಾಣ ಮಾಡಲು ಸಕಲ ಸಿದ್ದತೆ ನಡಯುತ್ತಿವೆ. ದಾನಿಗಳು ಸಹ ಮುಂದೆ ಬಂದಿದ್ದು, ಭಕ್ತರು ತಮ್ಮ ಶಕ್ತಿಗನುಸಾರವಾಗಿ ದಾನ ಮಾಡಬಹುದು ಎಂದು ಶ್ರೀಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

dsd
ಮಾದಪ್ಪನಿಗಾಗಿ ಬೆಳ್ಳಿರಥ ತಯಾರಿ
author img

By

Published : Dec 4, 2020, 8:05 AM IST

ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಬೆಳ್ಳಿರಥ ನಿರ್ಮಾಣ ಮಾಡಲು ಶ್ರೀಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಕಾರ್ಯದರ್ಶಿ ಜಯವಿಭವಸ್ವಾಮಿ ಪ್ರಕಟಣೆಯಲ್ಲಿ ತೇಗಿನ ಮರದ 17 ಅಡಿ ಎತ್ತರದ ರಥಕ್ಕೆ ಬೆಳ್ಳಿಯ ಕವಚ ಅಳವಡಿಕೆ ಕೆಲಸ ಇನ್ನೊಂದು ತಿಂಗಳಲ್ಲಿ ಆರಂಭವಾಗಲಿದೆ. ಬೆಳ್ಳಿ ಕವಚ ನಿರ್ಮಾಣಕ್ಕೆ 450 ಕೆ.ಜಿ ಶುದ್ಧ ಬೆಳ್ಳಿ ಅವಶ್ಯಕತೆ ಇದೆ. ಬೆಳ್ಳಿ ಕವಚ ನಿರ್ಮಿಸಲು ₹22ರಿಂದ ₹24 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಇದನ್ನು ಭರಿಸಲು ಇಬ್ಬರು ಭಕ್ತರು ಮುಂದೆ ಬಂದಿದ್ದಾರೆ. ‘ಬೆಂಗಳೂರಿನ ಹೆಚ್‌.ಎಸ್‌. ಸೋಮಶೇಖರ್‌ ಅರ್ಧ ಮೊತ್ತವನ್ನು, ಉಳಿದ ಅರ್ಧ ಮೊತ್ತವನ್ನು ಕೊಯಮತ್ತೂರಿನ ಮೋಹನ್ ರಾಮ್‌ ಎಂಬುವರು ಪಾವತಿಸಲು ಮುಂದೆ ಬಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಾಣಿಕೆ ಕೊಡಬಹುದು: ದಾನಿಗಳು ನಗದು ಅಥವಾ ಬೆಳ್ಳಿ ರೂಪದಲ್ಲಿ ಕಾಣಿಕೆ ಸಲ್ಲಿಸಬಹುದಾಗಿದ್ದು, ಶುದ್ಧ ಬೆಳ್ಳಿ ಗಟ್ಟಿ ಖರೀದಿಸಿ ಅಥವಾ ತಮ್ಮಲ್ಲಿದ್ದರೆ ದೇವಾಲಯದ ಪಾರುಪತ್ತೆಗಾರರಿಗೆ ನೀಡಿ ರಶೀದಿ ಪಡೆಯಬಹುದು. ಆನ್‌ಲೈನ್‌ ಮೂಲಕವೂ ಬೆಳ್ಳಿ ಪಾವತಿಸಿಸಬಹುದಾಗಿದೆ. ಭಕ್ತರು ದೇವಾಲಯದ ಪಾರುಪತ್ತೆಗಾರರಿಗೆ ಮಾತ್ರ ಬೆಳ್ಳಿ, ಹಣವನ್ನು ನೀಡಬೇಕು. ಬೆಟ್ಟದ ಇತರ ಕಡೆಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ಬೆಳ್ಳಿ ರಥಕ್ಕೆ ಯಾರಾದರು ದಾನ ಕೇಳಿದರೆ ನೀಡಬಾರದು ಎಂದು ದೇವಾಲಯ ಆಡಳಿತ ಮಂಡಳಿ ಹೇಳಿದೆ. ದಾನ ನೀಡುವವರು ಈ ತಿಂಗಳ 31ರ ಒಳಗಾಗಿ ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.