ETV Bharat / state

ಮತದಾನ ಆರಂಭವಾದ್ರೂ ಹಕ್ಕು ಚಲಾಯಿಸದೆ ಚುನಾವಣೆ ಬಹಿಷ್ಕರಿಸಿದ ಸಿದ್ದಯ್ಯನಪುರ ಜನ - Siddaiyanapura villagers boycotted election in Chamarajnagar

ಎರಡು ಸಾಮಾನ್ಯ ಹಾಗೂ ಎರಡು ಪರಿಶಿಷ್ಟ ಜಾತಿ ಸೇರಿ ಅಭ್ಯರ್ಥಿಗಳು ಆಯ್ಕೆಯಾಗುವ ಚುನಾವಣೆ ಇದಾಗಿದೆ. ಎರಡು ಸ್ಥಾನಕ್ಕೆ ಮಾತ್ರ ಮತದಾನ ಮಾಡಲು ಅವಕಾಶ ನೀಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

Siddaiyanapura villagers boycotted election
ಮತದಾನ ಮಾಡದೇ ಚುನಾವಣೆ ಬಹಿಷ್ಕರಿಸಿದ ಸಿದ್ದಯ್ಯನಪುರ ಗ್ರಾಮಸ್ಥರು
author img

By

Published : Dec 27, 2020, 10:43 AM IST

ಕೊಳ್ಳೇಗಾಲ : ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 1ನೇ ವಾರ್ಡ್​ನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿ ಎರಡೂವರೆ ಗಂಟೆಯಾದ್ರೂ ಒಬ್ಬರೂ ಮತದಾನ ಮಾಡದೆ, ಚುನಾವಣೆ ಬಹಿಷ್ಕರಿಸಿದ್ದಾರೆ.

ನಾಲ್ಕು ಸ್ಥಾನಕ್ಕೆ ಕೇವಲ ಎರಡೇ ಮತದಾನ ಮಾಡುವಂತೆ ಚುನಾವಣಾಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನದಿಂದ ದೂರ ಸರಿದು‌ ಪ್ರತಿಭಟನೆ ಮಾಡಿದ್ದಾರೆ. 11 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದರಲ್ಲಿ ನಾಲ್ಕು ಅಭ್ಯರ್ಥಿಗಳ ಆಯ್ಕೆ ಮಾಡಬೇಕಿರೋದ್ರಿಂದ ತಮಗೆ 4 ಮತ ಚಲಾವಣೆ ಮಾಡುವ ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.

Siddaiyanapura villagers boycotted election
ಮತದಾನ ಮಾಡದೇ ಚುನಾವಣೆ ಬಹಿಷ್ಕರಿಸಿದ ಸಿದ್ದಯ್ಯನಪುರ ಗ್ರಾಮಸ್ಥರು

ಇದನ್ನೂ ಓದಿ; ಮತದಾರರಿಗೆ ಬಿಗ್​ ಶಾಕ್ : ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು

ಎರಡು ಸಾಮಾನ್ಯ ಹಾಗೂ ಎರಡು ಪರಿಶಿಷ್ಟ ಜಾತಿ ಸೇರಿ ಅಭ್ಯರ್ಥಿಗಳು ಆಯ್ಕೆಯಾಗುವ ಚುನಾವಣೆ ಇದಾಗಿದೆ. ಎರಡು ಸ್ಥಾನಕ್ಕೆ ಮಾತ್ರ ಮತದಾನ ಮಾಡಲು ಅವಕಾಶ ನೀಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಲ್ಕು ಸ್ಥಾನಕ್ಕೆ ಮತದಾನ ಮಾಡಲು ಅವಕಾಶ ಕೊಡುವವರೆಗೂ ಮತದಾನ ಮಾಡದಿರಲು ನಿರ್ಧಾರ ಮಾಡಿ ರಸ್ತೆಯಲ್ಲಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಕೆಲಕಾಲ ವಾದ-ವಿವಾದ ನಡೆದು ಮನವೊಲಿಕೆಗೂ ಬಗ್ಗದ ಗ್ರಾಮಸ್ಥರು ವೋಟು ಹಾಕುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.