ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಮಂಗಲ ಗ್ರಾಮದಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರುತ್ತಿದ್ದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಚಂದ್ರಮ್ಮ(52) ಬಂಧಿತ ಮಹಿಳೆ. ಬೇರೆಡೆಯಿಂದ ಹಸಿ ಗಾಂಜಾ ತಂದು ಒಣಗಿಸಿ ಮೈಸೂರಿಗೆ ಹಾಗೂ ಸ್ಥಳೀಯ ಗಿರಾಕಿಗಳಿಗೆ ಚಂದ್ರಮ್ಮ ಹಾಗೂ ಆಕೆಯ ಮಗ ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ. ಮನೆಯಲ್ಲಿ ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು, ಬುಧವಾರ ಸಂಜೆ ದಾಳಿ ನಡೆಸಿ ಮಹಿಳೆಯನ್ನ ಬಂಧಿಸಿದ್ದು, ಆಕೆಯ ಮಗ ಪರಾರಿಯಾಗಿದ್ದಾನೆ.
ಬಂಧಿತಳಿಂದ 2 ಕೆಜಿಯಷ್ಟು ಒಣ ಗಾಂಜಾ, ಪ್ಯಾಕಿಂಗ್ ಕವರ್ ವಶಪಡಿಸಿಕೊಂಡಿದ್ದು, ಗುಂಡ್ಲುಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.