ಚಾಮರಾಜನಗರ: ಕೊರೊನಾ ಆತಂಕದ ನಡುವೆಯೂ ಸುಸೂತ್ರವಾಗಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಇಂಗ್ಲಿಷ್ ಪರೀಕ್ಷೆ ಮುಗಿದಿದ್ದು, ಗಣಿತ ಪರೀಕ್ಷೆಗೆ ಚಾಮರಾಜನಗರ ತಯಾರಾಗಿದೆ.
ಪರೀಕ್ಷೆ ಮುಗಿದ ಬಳಿಕ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಪರೀಕ್ಷಾ ಕೊಠಡಿಗಳನ್ನು ಶುಚಿಗೊಳಿಸಿ, ಗಣಿತ ಪರೀಕ್ಷೆಗೆ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.
ಯಾವುದೇ ಅತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಪ್ರತೀ ಪರೀಕ್ಷೆ ಬಳಿಕ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುವುದು. ಜ್ವರ ಇಲ್ಲವೇ ಶೀತ ಇರುವವರನ್ನು ಪ್ರತ್ಯೇಕವಾಗಿ ಬರೆಸಲಾಗುತ್ತದೆ. ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೇವೆಂದು ಬಾಲರಪಟ್ಟಣದ ಶಾಲೆಯ ಮುಖ್ಯೋಪಾಧ್ಯಾಯ ಸುಜಯ್ ಕುಮಾರ್ ತಿಳಿಸಿದರು.