ETV Bharat / state

ಅತಿವೃಷ್ಟಿ, ಬೆಂಕಿ ರೋಗ ಗೆದ್ದ RNR ಭತ್ತ: ಗಡಿಜಿಲ್ಲೆಯಲ್ಲಿ ಅಧಿಕ ಇಳುವರಿ ಕಂಡ 'ಮಧುಮೇಹಿ ಅಕ್ಕಿ' - RNR 15048 Giving Good Yield

ಹೈದರಾಬಾದ್​ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿರುವ ಆರ್​ಎನ್​ಆರ್ ತಳಿಯ ಭತ್ತವನ್ನು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರವು ಇರಸವಾಡಿ ಹಾಗೂ ಯಳಂದೂರು ತಾಲೂಕಿನ ವೈ‌.ಕೆ.ಮೋಳೆ ಗ್ರಾಮದಲ್ಲಿ 100 ಮಂದಿ ರೈತರಿಗೆ ಪರಿಚಯಿಸಿದ್ದು, ಬಂಪರ್ ಬೆಲೆ ಕಂಡಿದ್ದಾರೆ.

RNR ಭತ್ತ
ಅಧಿಕ ಇಳುವರಿ ಕಂಡ RNR-15048 ಭತ್ತ
author img

By

Published : Dec 18, 2021, 10:15 AM IST

ಚಾಮರಾಜನಗರ: ಎಡಬಿಡದೆ ಸುರಿದ ಮಳೆ, ಸಾಮಾನ್ಯವಾಗಿ ಬಾಧಿಸುತ್ತಿದ್ದ ಬೆಂಕಿರೋಗವನ್ನು ತಾಳಿಕೊಂಡು ಈ ಬಾರಿ ಡಯಾ ರೈಸ್ ಅಥವಾ ಮಧುಮೇಹಿಗಳ ಅಕ್ಕಿ ಎಂದೇ ಕರೆಯುವ RNR-15048 ಭತ್ತ ಜಿಲ್ಲೆಯಲ್ಲಿ ಉತ್ತಮ ಇಳುವರಿ ಬಂದಿದೆ.

ಹೈದರಾಬಾದ್​ನ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿರುವ ಆರ್​ಎನ್​ಆರ್ ತಳಿಯ ಭತ್ತವನ್ನು ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರವು ಇರಸವಾಡಿ ಹಾಗೂ ಯಳಂದೂರು ತಾಲೂಕಿನ ವೈ‌.ಕೆ.ಮೋಳೆ ಗ್ರಾಮದಲ್ಲಿ 100 ಮಂದಿ ರೈತರಿಗೆ ಪರಿಚಯಿಸಿದ್ದು, ಬಂಪರ್ ಬೆಲೆ ಕಂಡಿದ್ದಾರೆ.

ಸಮಗ್ರ ಕೃಷಿಯಡಿ ಕೆವಿಕೆ ವಿಜ್ಞಾನಿಗಳು 100 ಎಕರೆಯಷ್ಟು ಪ್ರದೇಶದಲ್ಲಿ ಈ ಭತ್ತವನ್ನು ಹಾಕಿಸಿದ್ದು, ಬೇರೆಲ್ಲಾ ಭತ್ತಗಳಿಂದ ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿಯ ಫಲಿತಾಂಶ ಕಂಡಿದ್ದಾರೆ. ಮಣ್ಣಿನ ಗುಣಮಟ್ಟ ಅಷ್ಟೇನೂ ಚೆನ್ನಾಗಿರದ ಪ್ರದೇಶದಲ್ಲೂ ಈ ತಳಿ ಉತ್ತಮವಾಗಿ ಬೆಳೆದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಅಧಿಕ ಇಳುವರಿ ಕಂಡ RNR-15048 ಭತ್ತ

ಮಧುಮೇಹಿಗಳ ಅಕ್ಕಿ:

ಆರ್ ಎನ್ ಆರ್-15048 ತಳಿಯು ರೋಗ ನಿರೋಧಕ ಹಾಗೂ ಇತರೆ ರೋಗಗಳನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ಇದು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯಲಿದೆ. ಧಾನ್ಯದ ಗುಣಮಟ್ಟ ಮತ್ತು ಅಕ್ಕಿಯ ಗುಣಮಟ್ಟ ಬೇರೆ ತಳಿಗಳಿಗಿಂತ ಉತ್ತಮವಾಗಿದೆ. ಆರ್ ಎನ್ ಆರ್ ತಳಿಯಲ್ಲಿ ಸಕ್ಕರೆ ಅಂಶ ಕಡಿಮೆ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೀಗಾಗಿ, ಇದನ್ನು ಡಯಾ ರೈಸ್ ಎಂದು ಸಹ ಕರೆಯಲಾಗುತ್ತಿದೆ.

ಈ ತಳಿಯ ಒಂದು ಕ್ವಿಂಟಾಲ್ ಭತ್ತದಿಂದ ಸುಮಾರು 65 ಕೆ.ಜಿಯಷ್ಟು ಅಕ್ಕಿ ಉತ್ಪಾದನೆಯಾಗಲಿದೆ. ಮಾರುಕಟ್ಟೆಯಲ್ಲಿ ಈ ತಳಿಯ ಒಂದು ಕ್ವಿಂಟಾಲ್ ಭತ್ತವನ್ನು 1,820 ರೂ. ಗೆ ರೈತರು ನೇರವಾಗಿ ಮಾರಾಟ ಮಾಡುತ್ತಿರುವುದು ವಿಶೇಷ. ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ನಾಲ್ಕು ವರ್ಷಗಳ ಹಿಂದಷ್ಟೇ ಪರಿಚಯಿಸಿರುವ ಆರ್ ಎನ್ ಆರ್ -15048 ತಳಿಯು ಕೇವಲ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೆ, ಮಣ್ಣಿನ ಗುಣಮಟ್ಟ ಉತ್ತಮವಾಗಿರುವ ಕಡೆಗಳಲ್ಲಿ ಒಂದು ಎಕರೆಯಲ್ಲಿ ಸುಮಾರು 40 ಕ್ವಿಂಟಾಲ್ ಇಳುವರಿಯನ್ನು ತೆಗೆಯಬಹುದಾಗಿದೆ. ಆದರೆ ಮಣ್ಣಿನ ಸಾರ ಕಡಿಮೆ ಹಾಗೂ ಕಪ್ಪು ಮಣ್ಣು ಪ್ರದೇಶದಲ್ಲಿ ಒಂದು ಎಕರೆಗೆ ಸುಮಾರು 25 ರಿಂದ 30 ಕ್ವಿಂಟಾಲ್ ಇಳುವರಿ ಲಭ್ಯವಾಗಲಿದೆ.

ಹೆಚ್ಚು ಇಳುವರಿ:

ಈ ತಳಿಗೆ ಯಾವುದೇ ರೀತಿಯಾದ ರೋಗಗಳು ಭಾದಿಸುವುದಿಲ್ಲ. 125 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದೆ. ಇತರೆ ತಳಿ ಭತ್ತ ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಒಂದು ಎಕರೆಗೆ ಸುಮಾರು 7 ರಿಂದ 8 ಸಾವಿರ ರೂ.ಗಳವರೆಗೆ ಖರ್ಚಾಗುತ್ತಿತ್ತು. ಆದರೆ ಸಮಗ್ರ ಭತ್ತದ ಬೆಳೆ ಪದ್ಧತಿಯಲ್ಲಿ ಆರ್ ಎನ್ ಆರ್ ತಳಿಯ ಭತ್ತ ಬೆಳೆಯುವ ಸಂದರ್ಭದಲ್ಲಿ ಕಳೆ ನಿರ್ವಹಣೆಗೆ ಕೇವಲ 1 ರಿಂದ 2 ಸಾವಿರ ರೂ.ಗಳವರೆಗೆ ಖರ್ಚಾಗಲಿದೆ. ಬೇರೆ ತಳಿ ಭತ್ತದ ಬೆಳೆಯಲ್ಲಿ ಸುಮಾರು 15 ರಿಂದ 20 ಕ್ವಿಂಟಾಲ್ ಇಳುವರಿ ಬಂದರೆ ಹೆಚ್ಚಿತ್ತು. ಆರ್ ಎನ್ ಆರ್ ತಳಿಯ ಬಗ್ಗೆ ಈ ಬಾರಿ ತರಬೇತಿ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆ ಕೊಟ್ಟಿರುವುದರಿಂದ 25 ಕ್ವಿಂಟಾಲ್ ಗಳಷ್ಟು ಇಳುವರಿ ಬಂದಿದೆ. ಇದರಿಂದ ರೈತರಿಗೆ ಮತ್ತು ನಮಗೂ ಹೆಚ್ಚು ಸಂತಸವಾಗಿದೆ ಎಂದು ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸುನಿಲ್ ತಿಳಿಸಿದರು.

ಕಡಿಮೆ ಖರ್ಚು :

ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ನಮಗೆ ಆರ್ ಎನ್ ಆರ್ ತಳಿಯನ್ನು ಪರಿಚಯಿಸಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಬಿತ್ತನೆ ಮಾಡಿದ ಪರಿಣಾಮ ಇಂದು ಭತ್ತದ ಇಳುವರಿ ಹೆಚ್ಚಾಗಿದೆ. ಇದರಿಂದ ಖರ್ಚು ಕೂಡ ಕಡಿಮೆಯಾಗಿದೆ. ಹಿಂದೆ ನಾವು ಒಂದು ಎಕರೆಗೆ 15 ರಿಂದ 16 ಕ್ವಿಂಟಾಲ್ ಭತ್ತವನ್ನು ಬೆಳೆಯುತ್ತಿದ್ದೆವು. ಆರ್ ಎನ್ ಆರ್ ಪರಿಚಯಿಸಿದ ಕಾರಣ ಈಗ ಒಂದು ಎಕರೆಗೆ 25 ರಿಂದ 26 ಕ್ವಿಂಟಾಲ್ ಬೆಳೆಯುತ್ತಿದ್ದೇವೆ. ಇದರಿಂದ ನಮಗೆ ಖರ್ಚು ಕೂಡ ಕಡಿಮೆಯಾಗಿದೆ. ಹೀಗಾಗಿ, ಈ ತಳಿಯನ್ನು ಹೆಚ್ಚು ರೈತರು ಅಳವಡಿಸಿಕೊಂಡರೆ ಅನುಲಕೂಲವಾಗಲಿದೆ ಎನ್ನುವುದು ರೈತರ ಮನದಾಳದ ಮಾತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.