ETV Bharat / state

'ಈ ಸಲ ಕಪ್ ನಮ್ದೆ' ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದ ಆರ್​ಸಿಬಿ ಅಭಿಮಾನಿ: ವಿಡಿಯೋ ವೈರಲ್ - ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಆರ್​​ಸಿಬಿ ಅಭಿಮಾನಿ

ದೇವರ ರಥಕ್ಕೆ ಇಲ್ಲೊಬ್ಬ ಆರ್​​ಸಿಬಿ ಅಭಿಮಾನಿ, ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್​​ ಆಗಿದೆ.

RCB fan who wrote
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ
author img

By

Published : Feb 26, 2020, 1:41 PM IST

ಚಾಮರಾಜನಗರ: ದೇವರ ರಥಕ್ಕೆ ಇಲ್ಲೊಬ್ಬ ಆರ್​​ಸಿಬಿ ಅಭಿಮಾನಿ, ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್​​ ಆಗಿದೆ.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 24 ರಂದು ರಥೋತ್ಸವ ಜರುಗಿತ್ತು. ಆ ವೇಳೆ, ಹನೂರಿನ ರಘು ಎಂಬ ಆರ್​ಸಿಬಿಯ ಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ. ಬಾಳೆ ಹಣ್ಣಿನ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆದು ಮಾದಪ್ಪನ ತೇರಿಗೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್​​ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು 'ಈ ಸಲ ಕಪ್ ನಮ್ದೆ' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಸತತ ಸೋಲಿನಿಂದ ಕಂಗೆಟ್ಟಿದ್ರೂ ಅಭಿಮಾನಿ ಬಳಗವೇನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ಸಲ ಕಪ್ ನಮ್ದೆ ಎಂಬ ಅಭಿಮಾನಿಗಳ ಉದ್ಘಾರ ಈ ಬಾರಿ ಮಲೆಮಹದೇಶ್ವರನಿಗೂ ತಲುಪಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.