ಚಾಮರಾಜನಗರ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ, ಆಧ್ಯಾತ್ಮಿಕ ಚಿಂತಕ ರವಿಶಂಕರ್ ಗುರೂಜಿ ಅವರಿಂದು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ, ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠಕ್ಕೆ ಭೇಟಿ ನೀಡಿ ಮಠದ ವೇದಆಗಮ ಪಾಠಶಾಲೆಯ ಗುರುಕುಲ ವಿದ್ಯಾರ್ಥಿಗಳಿಗೆ ಶುಭಸಂದೇಶ ತಿಳಿಸಿ, ಹಿರಿಯ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮಠ ಕೈಗೊಂಡ ಹಲವು ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರವಿಶಂಕರ್ ಗುರೂಜಿ, ಪ್ಲಾಸ್ಟಿಕ್‌ಮುಕ್ತ ಮಹದೇಶ್ವರ ಕ್ಷೇತ್ರದ ಅಭಿಯಾನಕ್ಕೆ ಶುಭ ಹಾರೈಸಿ, ಶ್ಲಾಘಿಸಿದರು.
ಬೆಟ್ಟಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಗೂರೂಜಿಗೆ ಪ್ರಾಧಿಕಾರವು ಅದ್ಧೂರಿ ಸ್ವಾಗತ ಕೋರಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.