ETV Bharat / state

ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ! - ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ

ಖಜಾನೆ ತುಂಬಿ ಹೋಗಿದ್ದರಿಂದ ಕೊಳ್ಳೇಗಾಲದ ಆಭರಣ ತಯಾರಕರನ್ನು ಕರೆಸಿ ಅನುಪಯುಕ್ತ ಬೆಳ್ಳಿ ಕರಗಿಸಿ 9-10 ಕೆಜಿಯ ಶುದ್ಧ ಬೆಳ್ಳಿ ಗಟ್ಟಿಗಳನ್ನು ತಯಾರಿಸಿಲಾಗುತ್ತಿದೆ. ಈ ಕಾರ್ಯಕ್ಕೆ 3-4 ದಿನ ಬೇಕಾಗಬಹುದು. ಶೇ.70-80ರಷ್ಟು ಶುದ್ಧ ಬೆಳ್ಳಿ ಸಿಗಬಹುದು..

chamarajanagar
ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ
author img

By

Published : Apr 11, 2021, 3:22 PM IST

ಚಾಮರಾಜನಗರ : ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವರಿಗೆ ಕಾಣಿಕೆಯಾಗಿ ಭಕ್ತರು ಅರ್ಪಿಸಿದ್ದ 400 ಕೆಜಿ ಬೆಳ್ಳಿಯನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಯನ್ನಾಗಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.

ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ ..

ಖಜಾನೆ ತುಂಬಿ ಹೋಗಿದ್ದರಿಂದ ಕೊಳ್ಳೇಗಾಲದ ಆಭರಣ ತಯಾರಕರನ್ನು ಕರೆಸಿ ಅನುಪಯುಕ್ತ ಬೆಳ್ಳಿ ಕರಗಿಸಿ 9-10 ಕೆಜಿಯ ಶುದ್ಧ ಬೆಳ್ಳಿ ಗಟ್ಟಿಗಳನ್ನು ತಯಾರಿಸಿಲಾಗುತ್ತಿದೆ. ಈ ಕಾರ್ಯಕ್ಕೆ 3-4 ದಿನ ಬೇಕಾಗಬಹುದು. ಶೇ.70-80ರಷ್ಟು ಶುದ್ಧ ಬೆಳ್ಳಿ ಸಿಗಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಬೆಳ್ಳಿಗಟ್ಟಿಗಳನ್ನು ಒಟ್ಟುಗೂಡಿಸಿ ಈ ತಿಂಗಳಾಂತ್ಯದಲ್ಲಿ ಬೆಳ್ಳಿರಥ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜೊತೆಗೆ ಖಜಾನೆಯಲ್ಲಿ ಅಪರೂಪದ ಹಳೆಯ ನಾಣ್ಯಗಳು ಮತ್ತು ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಬಹುದಾದ ಕೆಲವು ವಸ್ತುಗಳು‌ ಸಿಕ್ಕಿದೆ.‌ ಪರಿಣತರ ಸಹಾಯದಿಂದ ಅವುಗಳನ್ನು ಬೇರ್ಪಡಿಸಿ ಕಾಪಾಡಲಾಗುವುದು ಎಂದು ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.