ETV Bharat / state

ಕಾಡಿನ ರತ್ನಕ್ಕೆ ರಾಜ್ಯೋತ್ಸವ ಗರಿ: ಹೋರಾಟಗಾರ್ತಿ, ನಾಟಿ ವೈದ್ಯೆ, ಕಲಾವಿದೆ ಮಾದಮ್ಮಗೆ ಪ್ರಶಸ್ತಿ ಘೋಷಣೆ

85ರ ಹರೆಯದಲ್ಲೂ ಗಿಡಮೂಲಿಕೆ ಗುರುತಿಸುವಲ್ಲಿ, ನಾಟಿ ವೈದ್ಯಕೀಯ ಚಿಕಿತ್ಸೆ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ಹನೂರು ತಾಲೂಕಿನ ಜೀರಿಗೆಗದ್ದೆ ಪೋಡಿನ ಮಾದಮ್ಮಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

madamma
ಮಾದಮ್ಮ
author img

By

Published : Oct 31, 2022, 1:15 PM IST

ಚಾಮರಾಜನಗರ: ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಹನೂರು ತಾಲೂಕಿನ ಜೀರಿಗೆಗದ್ದೆ ಪೋಡಿನ ಮಾದಮ್ಮಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. 85ರ ಹರೆಯದಲ್ಲೂ ಗಿಡಮೂಲಿಕೆ ಗುರುತಿಸುವಲ್ಲಿ, ನಾಟಿ ವೈದ್ಯ ಮಾಡುವುದರಲ್ಲಿ ಮಾದಮ್ಮ ಮುಂಚೂಣಿ.

ಹೌದು, ಹೊರ ಜಗತ್ತಿಗೆ ತೆರೆದುಕೊಳ್ಳಲು ಶಿಕ್ಷಣ ಹಾಗೂ ಮೂಲಸೌಕರ್ಯದಿಂದ ವಂಚಿತರಾಗಿದ್ದ ಇವರು 40 ವರ್ಷಗಳ ಹಿಂದೆಯೇ ಸಮಾಜಸೇವಕ ಡಾ.ಸುದರ್ಶನ್ ಜೊತೆಗೂಡಿ ಸೋಲಿಗ ಅಭಿವೃದ್ಧಿ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಗಟ್ಟಿಗಿತ್ತಿ. ಮಾದಮ್ಮನವರು ರಾಜ್ಯಾದ್ಯಂತ ಪ್ರವಾಸ, ಕರ್ನಾಟಕ ಮಹಿಳಾ ಸಾಮಾಖ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೋಲಿಗರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು.

ಅಂದಹಾಗೆ, ಮಾದಮ್ಮ ಅವರು ಕೇವಲ ಸಂಘಟನೆ ಹೋರಾಟದಲ್ಲಷ್ಟೇ ಭಾಗಿಯಾಗದೇ ಹೆರಿಗೆ ಮಾಡಿಸುವುದರಲ್ಲೂ ಕೌಶಲ ಸಾಧಿಸಿದ್ದು, ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಜೊತೆಗೆ, ನಾಟಿ ವೈದ್ಯ ಪದ್ಧತಿಯಲ್ಲೂ ಪರಿಣತಿ ಹೊಂದಿದ್ದು, ಹಲವಾರು ರೋಗ ರುಜಿನಗಳಿಗೆ ಪರಿಣಾಮಕಾರಿ ಮದ್ದನ್ನು ಕೊಟ್ಟಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಕಲಾವಿದೆ ಮಾದಮ್ಮ

ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ ಕೆ ಸಿವನ್, ನಟ ದತ್ತಣ್ಣ‌, ಸಾಹಿತಿ ಕೃಷ್ಣೇಗೌಡ ಸೇರಿ 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಅದ್ಭುತ ಗಾಯಕಿ: ಅದ್ಭುತ ಗಾಯನ ಪ್ರತಿಭೆ ಹೊಂದಿರುವ ಮಾದಮ್ಮ, ಸೋಲಿಗ ಸಂಸ್ಕೃತಿ ಅನಾವರಣಗೊಳಿಸುವ ಹಾಡುಗಳು, ಗೊರುಕನ ನೃತ್ಯದಲ್ಲೂ ಪರಿಣಿತಿ ಹೊಂದಿದ್ದಾರೆ. ಚಾಮರಾಜನಗರದ ಜಲ್ಲೆಯ ಮಾದಮ್ಮ, ಹೊಸಪೋಡಿನ ಶಿವನೇಗೌಡ ಬಳಿಕ ಜೀರಿಗೆಗದ್ದೆಯ ಮಾದಮ್ಮಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಯೊಂದು ತಾನಾಗೇ ಅರಸಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.