ಚಾಮರಾಜನಗರ: ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನದ ಹೊತ್ತಿಗೆ ಜೋರು ಮಳೆಯಾಗಿದೆ.
ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ತಾಲೂಕಿನಲ್ಲಿ ಅರ್ಧ ತಾಸು ಜೋರು ಮಳೆಯಾಗಿದ್ದು ಅರಣ್ಯ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿ ಜೀವಕಳೆ ತುಂಬಿದೆ.
ಇಂದಿನಿಂದ 5 ದಿನಗಳ ಕಾಲ ಜಿಲ್ಲೆಯಲ್ಲಿ 2.5 ಮಿ.ಮೀ ನಿಂದ 7.5 ಮಿ.ಮೀ ಮಳೆಯಾಗಲಿದ್ದು, 14 ರಂದು ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ರಜತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.