ಚಾಮರಾಜನಗರ: ಪಿಯು ಫಲಿತಾಂಶ ಹೊರಬಿದ್ದಿದ್ದು, ಗಡಿಜಿಲ್ಲೆ ಚಾಮರಾಜನಗರ ಕಳೆದ ಬಾರಿಗಿಂತ 6 ಸ್ಥಾನ ಕುಸಿತ ಕಂಡಿದೆ.
ಕಳೆದ ಬಾರಿ ರಾಜ್ಯಕ್ಕೇ 6ನೇ ಸ್ಥಾನದಲ್ಲಿದ್ದ ಚಾಮರಾಜನಗರ ಜಿಲ್ಲೆ ಈ ಬಾರಿ 12ನೇ ಸ್ಥಾನಕ್ಕಿಳಿದಿದ್ದು, ಶೇ. 72.67ರಷ್ಟು ಫಲಿತಾಂಶ ಬಂದಿದೆ. ಪರಿಕ್ಷೆಗೆ ಹಾಜರಾದ 5,837 ವಿದ್ಯಾರ್ಥಿಗಳಲ್ಲಿ 4,268 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಶೇ. 72.67, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶೇ. 72.04 ಫಲಿತಾಂಶ ಹೊರಬಿದ್ದಿದ್ದು ಪಟ್ಟಣದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಶೇ.69.18, ವಾಣಿಜ್ಯ ವಿಭಾಗದಲ್ಲಿ 83.18 ಹಾಗೂ ವಿಜ್ಞಾನ ವಿಭಾಗದಲ್ಲಿ 59.05 ಫಲಿತಾಂಶ ಬಂದಿದ್ದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿರುವುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ 2017-18ರಲ್ಲಿ ಶೇ.75.30 ಫಲಿತಾಂಶದ ಮೂಲಕ ರಾಜ್ಯಕ್ಕೆ 6 ನೇ ಸ್ಥಾನ ಪಡೆದು ಟಾಪ್ ಟೆನ್ನಲ್ಲಿ ಗುರುತಿಸಿಕೊಂಡಿದ್ದ ಗಡಿಜಿಲ್ಲೆ ಈ ಬಾರಿ ಕಳಪೆ ಸಾಧನೆ ಮಾಡಿದೆ.