ETV Bharat / state

Free bus travel for women: ಶಕ್ತಿ ಯೋಜನೆ ಎಫೆಕ್ಟ್... ಖಾಸಗಿ ಬಸ್​ಗಳ 'ಖಾಲಿ' ಓಡಾಟ...

author img

By

Published : Jun 12, 2023, 10:50 PM IST

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಖಾಸಗಿ ಬಸ್​ ನಡೆಸುತ್ತಿರುವವರು ಕಂಗಲಾಗಿದ್ದಾರೆ. ಚಾಮರಾಜನಗರದಲ್ಲಿನ ಖಾಸಗಿ ಬಸ್​ಗಳ ಪರಿಸ್ಥಿತಿಯ ವರದಿ ಇಲ್ಲಿದೆ.

Etv Bharatdependents-of-private-bus-are-in-trouble-due-to-shakti-yojana-at-chamarajanagara
ಶಕ್ತಿ ಯೋಜನೆ ಎಫೆಕ್ಟ್​: ಖಾಸಗಿ ಬಸ್​ಗಳ 'ಖಾಲಿ' ಓಡಾಟ...

ಚಾಮರಾಜನಗರ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಸಂತಸ ಮೂಡಿಸಿದ್ದರೇ, ಖಾಸಗಿ ಬಸ್​ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 70ರಿಂದ 80 ಖಾಸಗಿ ಬಸ್​ಗಳು ದಿನನಿತ್ಯ ಸಂಚರಿಸುತ್ತಿವೆ. ಉಚಿತ ಪ್ರಯಾಣದಿಂದ ಮಹಿಳೆಯರು ಸರ್ಕಾರಿ ಬಸ್​ಗಳ ಕಡೆ ಮುಖ ಮಾಡಿದ್ದಾರೆ. ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರು ಬಾರದಿದ್ದರಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡುಬಂದವು.

ಟಂಟಂ, ಖಾಸಗಿ ಬಸ್​ಗಳನ್ನು ಆಶ್ರಯಿಸಿದ್ದ ಪ್ರಯಾಣಿಕರು ಈಗ ಕೆಎಸ್​ಆರ್​ಟಿಸಿ ಬಸ್​ಗಳತ್ತ ಮುಖ ಮಾಡಿರುವುದರಿಂದ ಖಾಸಗಿ ಬಸ್​ಗಳನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದವರ ಮೇಲೆ ಗಂಭೀರ ಪರಿಸ್ಥಿತಿ ಉಂಟಾಗಿದೆ. ಪ್ರತಿ ಟ್ರಿಪ್​ಗೆ 1800ರಿಂದ 2000 ರೂ. ಸಂಪಾದಿಸುತ್ತಿದ್ದ ಗ್ರಾಮಾಂತರ ಖಾಸಗಿ ಬಸ್​ಗಳು ದಿಢೀರನೇ 500ರಿಂದ 600 ರೂ. ಆದಾಯ ಇಳಿದಿದೆ. ಸರ್ಕಾರಿ ಬಸ್​ಗಳ ಸೌಲಭ್ಯ ಇಲ್ಲದ ಕಡೆಗೆ ಮಾತ್ರ ಜನರು ಖಾಸಗಿ ಬಸ್​ನ್ನು ಆಶ್ರಯಿಸುತ್ತಿದ್ದಾರೆ.

ಖಾಸಗಿ ಬಸ್ ಏಜೆಂಟ್ ರಾಘವೇಂದ್ರ ಮಾತನಾಡಿ, ಶಕ್ತಿ ಯೋಜನೆಯಿಂದ ಚಾಮರಾಜನಗರದ ಖಾಸಗಿ ಬಸ್​ ಪುರ್ತಿ ಖಾಲಿಯಾಗಿ ಓಡುತ್ತಿದೆ. ಸೋಮವಾರವಾದ ಇಂದು ಜನ ಕಿಕ್ಕಿರುದು ತುಂಬಬೇಕಿತ್ತು. ಆದರೆ ಇಂದು ಬಸ್​ಗಳು ಕಡಿಮೆಯಾಗಿವೆ ಮತ್ತು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಖಾಸಗಿ ಬಸ್​ಗಳಲ್ಲಿ ಮಹಿಳಾ ಪ್ರಯಾಕರು ತುಂಬಾ ಕಡಿಮೆಯಾಗಿದ್ದಾರೆ. ಎಲ್ಲಿ ಸರ್ಕಾರಿ ಬಸ್​ಗಳಿವೋ ಅಲ್ಲಿ ಖಾಸಗಿ ಬಸ್​ಗಳು ಓಡುತ್ತಿವೆ ಎಂದರು.

ಮುಖ್ಯವಾದ ಊರುಗಳಾದ ನಂಜನಗೂಡು, ಮೈಸೂರು, ನರಸೀಪುರ, ಗುಂಡ್ಲುಪೇಟೆ, ಕೊಳ್ಳೆಗಾಲಕ್ಕಾಗಲಿ ಪ್ರಯಾಣಿಕರು ಖಾಸಗಿ ಬಸ್​ನಲ್ಲಿ ಸಂಚರಿಸಲು ಆಗಮಿಸುತ್ತಿಲ್ಲ. ಮಹಿಳೆಯರಿಂದ ಖಾಸಗಿ ಬಸ್​ನಲ್ಲಿ ಪ್ರಯಾಣಿಸುವ​ ಪುರುಷರ ಸಂಖ್ಯೆಯೂ ಕಡಿಮೆಯಾಗಿದೆ. ಬಸ್​ ಖಾಲಿ ಓಡಾಡುತ್ತಿರುವುದರಿಂದ ನಮ್ಮ ಜೀವನಕ್ಕೆ ಕಷ್ಟ ಆಗುತ್ತುದೆ ಎಂದು ಅಳಲು ತೊಡಿಕೊಂಡರು.

ಖಾಸಗಿ ಬಸ್ ಚಾಲಕ ಪರಶಿವಮೂರ್ತಿ ಮಾತನಾಡಿ, ಶಕ್ತಿ ಯೋಜನೆಯಿಂದ ನಮ್ಮ ಕುಟುಂಬ ಬೀದಿಗೆ ಬರುವಷ್ಟು ತೊಂದರೆಯಾಗಿದೆ. ಸಿದ್ದರಾಮಯ್ಯ ನಮ್ಮ ಮೇಲೆ ಭಾರ ಎರೆದಿದ್ದಾರೆ. ಖಾಸಗಿ ಬಸ್​ನವರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಮಹಿಳೆಯ ಯಾರು ಖಾಸಗಿ ಬಸ್​ ಹತ್ತುತ್ತಿಲ್ಲ ಎಂದರು. ಖಾಸಗಿ ಬಸ್ ಕ್ಲೀನರ್ ಮಹಾದೇವಪ್ಪ ಮಾತನಾಡಿ, ಶಕ್ತಿ ಯೋಜನೆಯಿಂದ ಖಾಸಗಿ ಬಸ್​ನವರಿಗೆ ಸಮಸ್ಯೆಯಾಗುತ್ತಿದೆ. ಖಾಸಗಿ ಬಸ್​ಗಳಿಗೆ ತುಂಬ ನಷ್ಟವಾಗುತ್ತಿದೆ ಎಂದು ಹೇಳಿದರು.

ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರ ಕೊರತೆ: ಮತ್ತೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಖಾಸಗಿ ಬಸ್​ಗಳಿಗೆ ಮಹಿಳಾ ಪ್ರಯಾಣಿಕರ ಕೊರತೆಯನ್ನು ಸೃಷ್ಟಿಸಿದೆ. ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸರ್ಕಾರಿ ಬಸ್ ಓಡಾಡುವ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್​ಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ನಿತ್ಯ ಸಂಚರಿಸುವ ಮಹಿಳೆಯರು ಇಂದಿನಿಂದ ಸರ್ಕಾರಿ ಬಸ್ ನೆಚ್ಚಿಕೊಂಡಿದ್ದಾರೆ.

ಈಗ ಖಾಸಗಿ ಬಸ್​ನಲ್ಲಿ 75 ಶೇಕಡಾ ಮಹಿಳಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಇನ್ನೂ ಪ್ರಚಾರ ಆದ ನಂತರ ಹೇಗಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇವತ್ತು ಬೆಳಗ್ಗೆಯಿಂದಲೇ ತುಂಬಾ ಪ್ರಯಾಣಿಕರು ಕಡಿಮೆಯಾಗಿದ್ದಾರೆ ಎಂದು ಪುತ್ತೂರು ಬಸ್ ನಿರ್ವಾಹಕ ರಾಧಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: Lack of buses in Raichur: ತೆಲಂಗಾಣ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಸ್​ಗಳ ನಿಯೋಜನೆ.. ರಾಯಚೂರಿನಲ್ಲಿ ಪ್ರಯಾಣಿಕರಿಗೆ ಬಸ್​ ಕೊರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.