ETV Bharat / state

Video: ರಾಷ್ಟ್ರಪತಿಗೆ ಜೈಕಾರ - ಕಾರು ನಿಲ್ಲಿಸಿ ಹಾಡಿ ಮಕ್ಕಳತ್ತ ಕೈ ಬೀಸಿ, ನಗೆ ಚೆಲ್ಲಿದ ರಾಮನಾಥ್ ಕೋವಿಂದ್ - ಮಕ್ಕಳತ್ತ ರಾಷ್ಟ್ರಪತಿ ನಗು

ಯಳಂದೂರು ತಾಲೂಕಿನ ವಡ್ಡಗೆರೆ ಹೆಲಿಪ್ಯಾಡ್​ನಿಂದ ಬಿಳಿಗಿರಿರಂಗನ ಬೆಟ್ಟ ದೇವಾಲಯಕ್ಕೆ ತೆರಳುವಾಗ ರಾಷ್ಟ್ರಪತಿಗಳನ್ನು ಕಾಣಲು ಹಾಡಿಗಳಲ್ಲಿ ಮಕ್ಕಳು ಸೇರಿದ್ದರು. ಪ್ರೆಸಿಡೆಂಟ್ ಬೆಂಗಾವಲು ವಾಹನಗಳು ಬರುತ್ತಿದ್ದಂತೆ ಯುವಕರು ಜೈಕಾರ ಹಾಕಲು ಶುರು ಮಾಡಿದ್ದಾರೆ.

president-ramanath-kovind-smiled-towards-children-at-chamarajangara
ಮಕ್ಕಳತ್ತ ಕೈ ಬೀಸಿ, ನಗೆ ಚೆಲ್ಲಿದ ರಾಮನಾಥ್ ಕೋವಿಂದ್
author img

By

Published : Oct 7, 2021, 4:42 PM IST

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮಗೆ ಕೂಗುತ್ತಿದ್ದ ಜೈಕಾರದಿಂದ ಕಾರನ್ನು ನಿಲ್ಲಿಸಿ ಕೈ ಬೀಸಿದ ಘಟನೆ ಬಿಳಿಗಿರಿರಂಗನ ಬೆಟ್ಟದಲ್ಲಿ ಇಂದು ಮಧ್ಯಾಹ್ನ ನಡೆಯಿತು.

ಮಕ್ಕಳತ್ತ ಕೈ ಬೀಸಿ, ನಗೆ ಚೆಲ್ಲಿದ ರಾಮನಾಥ್ ಕೋವಿಂದ್

ಯಳಂದೂರು ತಾಲೂಕಿನ ವಡ್ಡಗೆರೆ ಹೆಲಿಪ್ಯಾಡ್​ನಿಂದ ಬಿಳಿಗಿರಿರಂಗನ ಬೆಟ್ಟ ದೇವಾಲಯಕ್ಕೆ ತೆರಳುವಾಗ ರಾಷ್ಟ್ರಪತಿಗಳನ್ನು ಕಾಣಲು ಹಾಡಿಗಳಲ್ಲಿ ಮಕ್ಕಳು ಸೇರಿದ್ದರು. ಪ್ರೆಸಿಡೆಂಟ್ ಬೆಂಗಾವಲು ವಾಹನಗಳು ಬರುತ್ತಿದ್ದಂತೆ ಯುವಕರು ಜೈಕಾರ ಹಾಕಲು ಶುರು ಮಾಡಿದ್ದಾರೆ. ಕೆಲವರು ಮೊಬೈಲ್ ಗಳನ್ನು‌ ಹಿಡಿದು ವಿಡಿಯೋ ಸೆರೆಹಿಡಿಯಲು ಮುಗಿಬಿದ್ದರು. ಆಗ ಇದನ್ನು ಗಮನಿಸಿದ ಕೋವಿಂದ್ ಕಾರನ್ನು ನಿಲ್ಲಿಸಿ ಹಾಡಿ ಮಕ್ಕಳತ್ತ ಕೈ ಬೀಸಿ ನಗೆ ಚೆಲ್ಲಿದ್ದಾರೆ‌.

'ರಾಷ್ಟ್ರಪತಿಗೆ ಜೈ, ಕೋವಿಂದ್ ಅವರಿಗೆ ಜೈ' ಎಂಬ ಜನರ ಜಯಘೋಷ ಮೊಳಗಿದ್ದಕ್ಕೆ ಧನ್ಯವಾದ ಅರ್ಪಿಸಿದ ಅವರು, ಎಲ್ಲರಿಗೂ ಕೈ ಬೀಸುತ್ತಾ, ಹಾಡಿ ಮಕ್ಕಳಿಗೆ ಶುಭ ಹಾರೈಸುತ್ತಾ ದೇವಸ್ಥಾನಕ್ಕೆ ತೆರಳಿದ್ದಾರೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ರಾಷ್ಟ್ರಪತಿ ದರ್ಶನವನ್ನು ಕಂಡ ಜನರು ಪುಳಕಿತರಾಗಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಓದಿ: ನಿಮ್ಮ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ಸಿಎಂ ʼಫ್ಯಾಮಿಲಿ ಬಿಸಿನೆಸ್​ʼ ಬಗ್ಗೆ ಟೀಕಿಸಿದನ್ನ ಮರೆತುಬಿಟ್ರಾ? ಹೆಚ್‌ಡಿಕೆ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.