ಚಾಮರಾಜನಗರ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮೂರು ದಿನ ನಡೆಯುವ ಫಲ-ಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದೆ. ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಹೂವಿನಲ್ಲಿ ಅರಳಿದ ಇಸ್ರೋ ಚಂದ್ರಯಾನ, ಮರಳಿನಲ್ಲಿ ಅರಳಿದ ಡಾ. ಬಿ ಆರ್ ಅಂಬೇಡ್ಕರ್, ಕಲ್ಲಂಗಡಿ ಹಣ್ಣುಗಳಲ್ಲಿ ಅರಳಿದ ಭಗತ್ ಸಿಂಗ್, ಪೇಜಾವರಶ್ರೀ, ಕದ್ರಿ ಗೋಪಾಲನಾಥ್, ಸಚಿವ ಸುರೇಶ ಕುಮಾರ್ ಸೇರಿ ಇನ್ನಿತರ ಚಿತ್ರಗಳು ಅದ್ಭುತವಾಗಿ ಮೂಡಿ ಬಂದಿವೆ.
ಕಳೆದ ಬಾರಿಯ ಫಲ-ಪುಷ್ಪ ಪ್ರದರ್ಶನದಲ್ಲಿ ಉದ್ಘಾಟನೆಯಾದ ಬಳಿಕ ನಿಂತಿದ್ದ ಕೃತಕ ಜಲಾಪತ ಇಂದು ಚಾಲೂ ಆಗಿದ್ದು 2 ಸೆಲ್ಫಿ ಸ್ಟಾಂಡ್‌ಗಳನ್ನೂ ಈ ಬಾರಿ ನಿರ್ಮಿಸಲಾಗಿದೆ. ಇದರೊಟ್ಟಿಗೆ ಆರೋಗ್ಯ, ಶಿಕ್ಷಣ, ಕೃಷಿ, ಮೀನುಗಾರಿಕೆ ಇಲಾಖೆಯು ಮಳಿಗೆಗಳನ್ನು ತೆರೆದಿದ್ದು ಜನರಿಗೆ ಸಲಹೆ ಸೂಚನೆಗಳನ್ನು ನೀಡಲಿದೆ.
ಇದರೊಟ್ಟಿಗೆ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಗಾಳಿಪಟ ಉತ್ಸವವೂ ಭಾನುವಾರ ನಡೆಯಲಿದೆ. ಈಗಾಗಲೇ ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿ ನಡೆಸಿದೆ.