ಕೊಳ್ಳೇಗಾಲ: ಕೊರೊನಾ ಭೀತಿ ನಡುವೆಯು ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಮೇಘನಾ ಎಂ. 625ಕ್ಕೆ 621 ಅಂಕ ಗಳಿಸುವ ಮೂಲಕ ಜಿಲ್ಲೆಯ ಟಾಪರ್ ಆಗಿ ಹೊರ ಹೊರಮ್ಮಿದ್ದಾಳೆ.
ಮೇಘನಾ ಕೊಳ್ಳೇಗಾಲ ಪಟ್ಟಣದ ದೇವಾಂಗಪೇಟೆ ಸಮೀಪದ ರಾಜರಾಜೇಶ್ವರಿ ಕಲ್ಯಾಣ ಮಂಟಪ ರಸ್ತೆಯ ನಿವಾಸಿಗಳಾದ ಮಹೇಶ್ ಹಾಗೂ ರೂಪ ದಂಪತಿ ಪುತ್ರಿ. ಮೇಘನಾ ತಂದೆ ಮಹೇಶ್ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾ ಣೆಯಲ್ಲಿ ಜೀಪ್ ಡ್ರೈವರ್ ಆಗಿ ಕಾರ್ಯನಿರ್ವಹಿತ್ತಿದ್ದಾರೆ. ತಂದೆಯ ನನ್ನ ಮಗಳು ಎಷ್ಟಾದರೂ ಓದಲಿ ನಾ ಓದಿಸುತ್ತೇನೆ ಎಂಬ ಛಲ, ತಾಯಿ ಮಕ್ಕಳಿಗೆ ಓದೇ ಜೀವನ ಎಂಬ ಆಶಯ ಮೇಘನಾ ಶಿಕ್ಷಣಕ್ಕೆ ದಾರಿ ದೀಪವಾಗಿದೆ.
ಈಟಿವಿ ಭಾರತದೊಂದಿಗೆ ಫಲಿತಾಂಶದ ಸಂತಸ ಹಂಚಿಕೊಂಡ ಟಾಪರ್ ಮೇಘನಾ, 621 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿರುವುದು ನನಗೆ ಸಂತಸ ತಂದಿದೆ. ನನ್ನ ತಂದೆ-ತಾಯಿ ಮತ್ತು ಶಿಕ್ಷಕರ ಪ್ರೋತ್ಸಾಹ ನನಗೆ ಉತ್ತಮ ಅಂಕ ಪಡೆಯಲು ಸಹಾಯಕವಾಯಿತು. ಶಾಲೆಯಲ್ಲಿ ಶಿಕ್ಷಕರು ಪರೀಕ್ಷೆ ಹೇಗೆ ಬರೆಯಬೇಕು, ಹೇಗೆ ಓದಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಸಣ್ಣ-ಸಣ್ಣ ಓದಿನ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಎಷ್ಟೂ ಸರಿ ಕೇಳಿದರೂ ಪುನಾರವರ್ತಿಸಿ, ಬಗೆ ಹರಿಸುತ್ತಿದ್ದರು. ಕೊರೊನಾ ರಜೆಯಲ್ಲೂ ನಾನು ಓದಿನ ಕಡೆ ಗಮನ ಹರಿಸುತ್ತಿದ್ದೆ. ಪರೀಕ್ಷೆಯಲ್ಲೂ ನನಗೆ ಆತಂಕ ಇರಲಿಲ್ಲ. ನಿರಂತರ ಓದಿನಿಂದ ಟಾಪರ್ ಆಗಲೂ ಸಾಧ್ಯವಾಗಿದೆ ಎಂದರು.
ದಿನದ 6 ತಾಸು ಓದಿಗೆ ಮೀಸಲು: ನಾನು ದಿನದಲ್ಲಿ 6 ಗಂಟೆ ಓದಿಗೆ ಮೀಸಲಿಡುತ್ತಿದ್ದೆ. ಮುಂಜಾನೆಯ ಸಮಯದ ಓದು ನೆನಪಿನ ಶಕ್ತಿಯಲ್ಲಿ ಉಳಿಯುತ್ತದೆ. ಟ್ಯೂಷನ್ಗೂ ಸೇರಿಕೊಂಡಿದ್ದೆ. ಪಿಯುನಲ್ಲಿ ವಿಜ್ಞಾನದ ವಿಷಯ ಆಯ್ಕೆ ಮಾಡಿಕೊಳ್ಳಲು ಚಿಂತಿಸಿದ್ದೇನೆ. ಡಾಕ್ಟರ್ ಆಗುವ ಬಯಕೆಯಿದೆ. ಅದರ ಜೊತೆಗೆ ಯುಪಿಎಸ್ಸಿ ಪರೀಕ್ಷೆ ಪಡೆದು ಐಎಎಸ್ ಪಾಸ್ ಮಾಡುವ ಕನಸು ನನ್ನದು ಎಂದಿದ್ದಾರೆ.