ETV Bharat / state

ಸುಳ್ವಾಡಿ ವಿಷ ಪ್ರಸಾದ ದುರಂತ: ಸಂತ್ರಸ್ತರನ್ನು ಮರೆತುಬಿಡ್ತಾ ಸರ್ಕಾರ? - etv bharat

ಚಾಮರಾಜನಗರದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ನಡೆದಿದ್ದ ವಿಷ ಪ್ರಸಾದ ಸೇವನೆ ದುರಂತ ಪ್ರಕರಣದ ಸಂತ್ರಸ್ತರು ನ್ಯಾಯಕ್ಕಾಗಿ ಅಳಲು ತೋಡಿಕೊಂಡಿದ್ದಾರೆ.

ನ್ಯಾಯಕ್ಕಾಗಿ ಸುಳ್ವಾಡಿ ಪ್ರಸಾದ ದುರಂತದ ಸಂತ್ರಸ್ತರ ಅಳಲು
author img

By

Published : Aug 27, 2019, 6:20 PM IST

Updated : Aug 27, 2019, 8:30 PM IST

ಚಾಮರಾಜನಗರ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದದ ನೋವುಂಡವರ ಕಥೆ ಮುಗಿದಂತಿಲ್ಲ.‌ ರಕ್ಕಸ ವಿಷವುಂಡು ಮರುಗಿದವರನ್ನು ಸರ್ಕಾರ ಕಡೆಗಣಿಸಿದೆ ಎಂದು ಪ್ರಸಾದ ದುರಂತದ ಸಂತ್ರಸ್ತರು ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಸುಳ್ವಾಡಿ ಪ್ರಸಾದ ದುರಂತದ ಸಂತ್ರಸ್ತರ ಅಳಲು

ಹನೂರಿನಲ್ಲಿ ವಿಷ ಪ್ರಸಾದ ದುರಂತದ 50ಕ್ಕೂ ಹೆಚ್ಚು ಮಂದಿ ಸಂತ್ರಸ್ತರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸದೇ ಉದಾಸೀನ ತೋರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಂತ್ರಸ್ತರಿಗೆ 3 ಎಕರೆ ಜಮೀನು ಮತ್ತು ಕೊಳವೆ ಬಾವಿ ಕೊರೆಸಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು.‌ 3 ಲಕ್ಷ ರೂ.ವರೆಗೆ ನೇರ ಸಾಲ ನೀಡುವ ಜೊತೆಗೆ ಉದ್ಯೋಗ ಸೃಷ್ಟಿ ಮಾಡಿಕೊಡುವುದಾಗಿ ನೀಡಿದ್ದ ಮಾತುಗಳು ಹುಸಿಯಾಗಿವೆ ಎಂದು ವಿಷ ಪ್ರಸಾದ ದುರಂತದ ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ. ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಕೂಡಲೇ ಈಡೇರಿಸಿ ಪ್ರಕರಣದಲ್ಲಿ ಬಲಿಪಶುಗಳಾದ ಸಂತ್ರಸ್ತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹೆಚ್.​ಡಿ.ಕುಮಾರಸ್ವಾಮಿ ಬರಲಿಲ್ಲ:

ಘಟನೆ ನಡೆದಿದ್ದಾಗ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ 2019ರ ಜ. 15ರಂದು ಬಿದರಹಳ್ಳಿ ಇಲ್ಲವೇ ಸುಳ್ವಾಡಿ ಗ್ರಾಮಕ್ಕೆ ಭೇಟಿ ನೀಡಿ ದಿನಪೂರ್ತಿ ಗ್ರಾಮಸ್ಥರ ಅಹವಾಲು ಸ್ವೀಕರಿಸುತ್ತೇನೆ ಎಂದು ಮಾತು ನೀಡಿದ್ದರು. ಆದರೆ ಈಡೇರಿಸಲಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Intro:ವಿಷ ಉಂಡವರನ್ನು ಮರೆತ ಸರ್ಕಾರ: ನ್ಯಾಯಕ್ಕಾಗಿ ಪ್ರಸಾದ ದುರಂತ ಸಂತ್ರಸ್ಥರ ಅಳಲು

ಚಾಮರಾಜನಗರ: ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ನೋವುಂಡರ ಕಥೆ ಮುಗಿದಂತಿಲ್ಲ.‌ ರಕ್ಕಸ ವಿಷವುಂಡು ಮರುಗಿದವರನ್ನು ಸರ್ಕಾರ ಕಡೆಗಣಿಸಿದೆ ಎಂದು ಪ್ರಸಾದ ದುರಂತದ ಸಂತ್ರಸ್ಥರು ಆರೋಪಿಸಿದ್ದಾರೆ.

Body:ಹನೂರಿನಲ್ಲಿ ವಿಷ ಪ್ರಸಾದ ದುರಂತದ ೫೦ ಕ್ಕೂ ಹೆಚ್ಚು ಮಂದಿ ಸಂತ್ರಸ್ಥರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ನೀಡಿದ್ದ ಭರವಸೆಗಳು ಈಡೇರಿಸದೇ ಉದಾಸೀನ ತೋರುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ಥರಿಗೆ ೩ ಎಕರೆ ಜಮೀನು ಮತ್ತು ಕೊಳವೆ ಬಾವಿ ಕೊರೆಯಿಸಿಕೊಡುವ ಭರವಸೆ ನೀಡಿತ್ತು.‌೩ ಲಕ್ಷ ರೂ. ವರೆಗೆ ನೇರ ಸಾಲ ನೀಡುವ ಜೊತೆಗೆ ಉದ್ಯೋಗ ಸೃಷ್ಟಿ ಮಾಡಿಕೊಡುವುದಾಗಿ ನೀಡಿದ್ದ ಮಾತುಗಳು ಹುಸಿಯಾಗಿದ್ದು ವಿಷ ಪ್ರಸಾದ ಉಂಡವರು ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಎಂದು ಸಂತ್ರಸ್ಥರು ನೋವು ತೋಡಿಕೊಂಡಿದ್ದಾರೆ.

ಇದೇ ವೇಳೆ, ಪ್ರಕರಣ ಶೀಘ್ರ ಇತ್ಯರ್ಥಕ್ಕಾಗಿ ಹನೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಮತ್ತು ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಪುಟ್ಟಮಾದಯ್ಯ ಅವರನ್ನು ವರ್ಗಾವಣೆ ಮಾಡಿದ್ದು ಕೂಡಲೇ ಅವರನ್ನು ಪ್ರಕರಣ ಇತ್ಯರ್ಥವಾಗುವರೆಗೆ ಪುಟ್ಟಮಾದಯ್ಯ ಅವರನ್ನೇ ತನಿಖಾಧಿಕಾರಿಯಾಗಿ ಮುಂದುವರೆಸಬೇಕು ಎಂದು ಸಂತ್ರಸ್ಥರು ಆಗ್ರಹಿಸಿದ್ದಾರೆ.

ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಕೂಡಲೇ ಈಡೇರಿಸಿ ಪ್ರಕರಣದಲ್ಲಿ ಬಲಿಪಶುಗಳಾದ ಸಂತ್ರಸ್ಥರ ನೆರ ವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಬಿದರಹಳ್ಳಿ, ಎಂ.ಜಿ.ದೊಡ್ಡಿ ಹಾಗೂ ಸುಳ್ವಾಡಿಯ ೫೦ ಕ್ಕೂ ಹೆಚ್ಚು ಗ್ರಾಮಸ್ಥರು ಇದ್ದರು.

Conclusion:ಎಚ್ಡಿಕೆ ಬರಲಿಲ್ಲ: ಪ್ರಕರಣ ನಡೆದಿದ್ದಾಗ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ೨೦೧೯ರ ಜ.೧೫ ರಂದು ಬಿದರಹಳ್ಳಿ ಇಲ್ಲವೇ ಸುಳ್ವಾಡಿ ಗ್ರಾಮಕ್ಕೆ ಭೇಟಿ ನೀಡಿ ದಿನಪೂರ್ತಿ ಗ್ರಾಮಸ್ಥರ ಅಹವಾಲು ಸ್ವೀಕರಿಸುತ್ತೇನೆ ಎಂದು ಮಾತು ನೀಡಿದ್ದರು. ಪ್ರಕರಣ ನಡೆದ ಒಂದು ತಿಂಗಳಿಗೆ ಈಟಿವಿ ಭಾರತ ಭರವಸೆ ಈಡೇರಿಸದ ಎಚ್ಡಿಕೆ ಎಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೈಟ್೧- ಮಣಿ, ಎಂಜಿದೊಡ್ಡಿ ಗ್ರಾಮ

ಬೈಟ್೨, ಸಂತ್ರಸ್ಥ ಮಹಿಳೆ
Last Updated : Aug 27, 2019, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.