ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸಫಾರಿ ಹಾಗೂ ತಮಿಳುನಾಡಿನ ತೆಪ್ಪಕಾಡಿನ ಆನೆ ಶಿಬಿರದ ಪ್ರಧಾನಿ ಮೋದಿ ಭೇಟಿ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಮಸನಿಗುಡಿ ತನಕ ಕಾರಿನಲ್ಲಿ ತೆರಳಿದ ಮೋದಿ, ಅಲ್ಲಿಂದ ಎಂಐ17 ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣಿಸಿದರು.
ಹುಲಿ ಯೋಜನೆಯ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಕೊಟ್ಟಿದ್ದರು. ಓಪನ್ ಜೀಪ್ನಲ್ಲಿ ಅವರು ವನ್ಯಜೀವಿ ಸಫಾರಿ ನಡೆಸಿದರು. ಟೋಪಿ, ಗಾಗಲ್ಸ್ ಜೊತೆಗೆ ಕ್ಯಾಮರಾ ಹಿಡಿದು ಸಫಾರಿ ದಿರಿಸಿನಲ್ಲಿ ಕಾಡಿಗೆ ಮೋದಿ ಸಂಚರಿಸಿ ವನ್ಯಜೀವಿಗಳು, ಪ್ರಕೃತಿ, ಪರಿಸರ ಮತ್ತು ವನ್ಯ ಸಂಪತ್ತಿನ ಸೌಂದರ್ಯ ಕಣ್ಣು ತುಂಬಿಕೊಂಡರು. ಪ್ರಧಾನಿ ಮೋದಿ ಸಫಾರಿ ವಾಹನದೊಂದಿಗೆ ಒಟ್ಟು ಒಂಭತ್ತು ವಾಹನಗಳು ಜೊತೆಗೆ ಸಾಗಿದವು.
-
#WATCH | Prime Minister Narendra Modi feeds an elephant at Theppakadu elephant camp pic.twitter.com/5S8bhRU67T
— ANI (@ANI) April 9, 2023 " class="align-text-top noRightClick twitterSection" data="
">#WATCH | Prime Minister Narendra Modi feeds an elephant at Theppakadu elephant camp pic.twitter.com/5S8bhRU67T
— ANI (@ANI) April 9, 2023#WATCH | Prime Minister Narendra Modi feeds an elephant at Theppakadu elephant camp pic.twitter.com/5S8bhRU67T
— ANI (@ANI) April 9, 2023
ಬಂಡೀಪುರದಲ್ಲಿ ಸಫಾರಿ ಬಳಿಕ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪಕಾಡಿನ ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಈ ವೇಳೆ ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆ ಕಬ್ಬು ತಿನ್ನಿಸಿದ ಮೋದಿ, ಟಿ23 ಹುಲಿ ಸೆರೆ ಹಿಡಿದ ಮೂವರು ಸಿಬ್ಬಂದಿ ಮತ್ತು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಯನ್ನೂ ಗೌರವಿಸಿದರು. ಇದೇ ಸಂದರ್ಭದಲ್ಲಿ ಆಸ್ಕರ್ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ಚಿತ್ರದ ಮುಖ್ಯ ಪಾತ್ರಧಾರಿಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿದರು. ಬೊಮ್ಮ - ಬೆಳ್ಳಿ ದಂಪತಿಯೊಂದಿಗೆ ಗಜಪಡೆ ಹತ್ತಿರಕ್ಕೆ ಬಂದು ಪ್ರಧಾನಿ ಆನೆಗಳನ್ನು ಸ್ಪರ್ಶಿಸಿದರು.
-
#WATCH | Prime Minister Narendra Modi visits Theppakadu elephant camp pic.twitter.com/vjlrYqbwtG
— ANI (@ANI) April 9, 2023 " class="align-text-top noRightClick twitterSection" data="
">#WATCH | Prime Minister Narendra Modi visits Theppakadu elephant camp pic.twitter.com/vjlrYqbwtG
— ANI (@ANI) April 9, 2023#WATCH | Prime Minister Narendra Modi visits Theppakadu elephant camp pic.twitter.com/vjlrYqbwtG
— ANI (@ANI) April 9, 2023
ಇನ್ನು, ಪ್ರಧಾನಿ ಅವರನ್ನು ನೀಡಲು ರಸ್ತೆ ಮಾರ್ಗದಲ್ಲಿ ಸುತ್ತ-ಮುತ್ತಲಿನ ಗ್ರಾಮಸ್ಥರು ಸೇರಿದ್ದರು. ಆಗ ನೆರೆದಿದ್ದ ಜನಸ್ತೋಮದತ್ತ ಕೈ ಬೀಸಿದ ಮೋದಿ ಅಲ್ಲಿಂದ ಹೆಲಿಪ್ಯಾಡ್ಗೆ ಆಗಮಿಸಿದರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಲಿಗಳ ಗಣತಿ ವಿವರ ಬಿಡುಗಡೆ ಮಾಡಲಾಗುತ್ತದೆ. ಈ ವರದಿಯಲ್ಲಿ ಕರ್ನಾಟಕ ನಂ 1 ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬಂಡೀಪುರ ಕಾಡಲ್ಲಿ ಒಂದೂವರೆ ತಾಸು ಪ್ರಧಾನಿ ಸಫಾರಿ