ETV Bharat / state

ಮಾಕ್‌ಟೇಲ್‌ ಕುಡಿದು ಕೊಳ್ಳೇಗಾಲದ ಮಂದಿ ಚಿಲ್‌ ! - ರೆಸಾರ್ಟ್, ರೆಸ್ಟೋರೆಂಟ್, ಬೀಚ್

ರೆಸಾರ್ಟ್, ರೆಸ್ಟೋರೆಂಟ್, ಬೀಚ್‌ಗಳಲ್ಲಿ ಸಿಗುತ್ತಿದ್ದ ಮಾಕ್‌ಟೇಲ್ ಡ್ರಿಂಕ್ ಈಗ ಹಳ್ಳಿಯ ಟೀ ಸ್ಟಾಲ್‌ಗಳಿಗೂ ಕಾಲಿಟ್ಟಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಮಾಕ್‌ಟೇಲ್ ಕುಡಿದು ಚಿಲ್‌ ಆಗುತ್ತಿದ್ದಾರೆ.

ಮಾಕ್ ಟೇಲ್ ಟೀ ಅಂಗಡಿ
author img

By

Published : Apr 13, 2019, 4:45 PM IST

ಚಾಮರಾಜನಗರ: ಬಿಸಿಲ ಝಳ, ಬಾಯಾರಿಕೆ, ದಣಿವು ನೀಗಿಸಿಕೊಳ್ಳಲು ಕೊಳ್ಳೇಗಾಲದ ಮಂದಿ ಮಾಕ್‌ಟೇಲ್ ಕುಡಿಯುತ್ತಿದ್ದಾರೆ.

ಮಾಕ್‌ಟೇಲ್‌ ಕುಡಿಯಲು ಈಗ ರೆಸಾರ್ಟ್, ರೆಸ್ಟೋರೆಂಟ್, ಬೀಚ್‌ಗಳಿಗೆ ಹೋಗಬೇಕಿಲ್ಲ. ಹಳ್ಳಿ ಹಳ್ಳಿಗಳ ಟೀ ಸ್ಟಾಲ್‌ಗಳಲ್ಲೂ ಈ ಪೇಯ ಸಿಗುತ್ತಿದೆ. ಇದಕ್ಕೊಂದು ಉದಾಹರಣೆ ಕೊಳ್ಳೇಗಾಲದ ಬೃಂದಾವನ ಹೈವೇ ಟೀ ಸ್ಟಾಲ್. ಬಿಸಿಲಿನ ಧಗೆ ತಡೆದುಕೊಳ್ಳಲಾಗದೇ ಇಲ್ಲಿನ ಜನರು ಈ ಅಂಗಡಿಗೆ ದಾಂಗುಡಿ ಇಡುತ್ತಿದ್ದು, ಮಾಕ್‌ಟೇಲ್ ಮಜಾ ಅನುಭವಿಸುತ್ತಿದ್ದಾರೆ.

ಮಾಕ್ ಟೇಲ್ ಟೀ ಅಂಗಡಿ

ಮಾಕ್‌ಟೇಲ್‌ ನಾನ್ ಅಲ್ಕೋಹಾಲಿಕ್ ಡ್ರಿಂಕ್. ನಿಂಬೆ, ಪುದೀನಾ ಹಾಕಿ ಈ ಪೇಯ ತಯಾರಿಸುವುದರಿಂದ ಕುಡಿಯಲು ಆಹ್ಲಾದವಾಗಿರುತ್ತದೆ ಎಂದು ಟೀ ಅಂಗಡಿ ಮಾಲೀಕ ಹರೀಶ್ ಹೇಳುತ್ತಾರೆ. ಇಲ್ಲಿ ಗ್ರಾಹಕರು ಪ್ರತಿ ಗ್ಲಾಸು ಮಾಕ್‌ಟೇಲ್‌ಗೆ 15 ರೂ. ಪಾವತಿಸಬೇಕು. ಅಂಗಡಿಯಲ್ಲಿ ದಿನವೊಂದಕ್ಕೆ 300-350 ಗ್ಲಾಸ್ ಮಾಕ್ ಟೇಲ್ ಮಾರಾಟವಾಗುತ್ತಿದೆ ಎನ್ನುತ್ತಾರೆ ಅಂಗಡಿ ಮಾಲೀಕರು.

ನಮ್ಮಲ್ಲಿ ಸಿಗುವ ಮಾಕ್‌ಟೇಲ್‌ನ್ನು ಒಮ್ಮೆ ಬಂದು ಟೇಸ್ಟ್ ಮಾಡಿದವರು ಖಾಯಂ ಗ್ರಾಹಕರಾಗಿ ಪ್ರತಿದಿನ ಇಷ್ಟಪಟ್ಟು ಸೇವಿಸುತ್ತಿದ್ದಾರೆ ಎಂದು ಹರೀಶ್‌ ಹೇಳಿದರು.

ನಾನು ಕೂಡ ಪ್ರತಿದಿನ ಮಾಕ್‌ಟೇಲ್ ಸೇವಿಸುತ್ತಿದ್ದು ಪೇಯ ರುಚಿಯಾಗಿದೆ. ನನಗೆ ಈ ರುಚಿ ಮತ್ತು ಪೇಯ ಎರಡು ಹೊಸತು ಎನ್ನುತ್ತಾರೆ ಗ್ರಾಹಕ ಗುರುಮೂರ್ತಿ.

Intro:ಬಿಸಿಲ ಬೇಗೆ, ಬಾಯಾರಿಕೆ:  ಟೀ ಅಂಗಡಿಯ ಮಾಕ್ ಟೇಲ್ ಮುಗಿಬಿದ್ದ ಜನತೆ!

ಚಾಮರಾಜನಗರ: ಬಿಸಿಲ ಝಳ, ಬಾಯಾರಿಕೆ, ದಣಿವು ನೀಗಿಸಿಕೊಳ್ಳಲು ಕೊಳ್ಳೇಗಾಲದ ಮಂದಿ ಮಾಕ್ ಟೇಲ್ ಮೊರೆ ಹೋಗಿದ್ದಾರೆ.

Body:ಹೌದು, ರೆಸಾರ್ಟ್, ರೆಸ್ಟೋರೆಂಟ್, ಬೀಚ್ ಗಳಷ್ಟೆ ಸಿಗುತ್ತಿದ್ದ ಮಾಕ್ ಟೇಲ್ ಡ್ರಿಂಕ್ ಈಗ ಕೊಳ್ಳೇಗಾಲದ ಬೃಂದಾವನ ಹೈವೇ ಟೀ ಸ್ಟಾಲ್  ಅಂಗಡಿಯಲ್ಲಿ ಸಿಗುತ್ತಿರುವುದರಿಂದ ಯುವಕರು, ಹಿರಿಯರು ಡ್ರಿಂಕ್ ಎಂಜಾಯ್ ಮಾಡುತ್ತಿದ್ದಾರೆ.

ಮಾಕ್ ಟೇಲ್ ಎಂಬುದು ನಾನ್ ಅಲ್ಕೋಹಾಲಿಕ್ ಡ್ರಿಂಕ್ ಆಗಿದ್ದು ನಿಂಬೆ, ಪುದೀನಾ ಹಾಕುವುದರಿಂದ ಆಹ್ಲಾದವಾಗಿರುತ್ತದೆ ಎಂದು ಟೀ ಅಂಗಡಿ ಮಾಲೀಕ ಹರೀಶ್ ಹೇಳಿದರು.

ಇನ್ನು, ಮಾಕ್ ಟೇಲ್ ಒಂದು ಗ್ಲಾಸಿಗೆ ೧೫ ರೂ. ಆಗಿದ್ದು ದಿನವೊಂದಕ್ಕೆ ೩೦೦-೩೫೦ ಗ್ಲಾಸ್ ಮಾಕ್ ಟೇಲ್ ಮಾರಾಟವಾಗುತ್ತಿದೆ, ಒಮ್ಮೆ ಬಂದು ಟೇಸ್ಟ್ ಮಾಡಿದವರು ಖಾಯಂ ಗ್ರಾಹಕರಾಗಿ ಪ್ರತಿದಿನ ಪ್ರೀತಿಪಟ್ಟು ಸೇವಿಸುತ್ತಿದ್ದಾರೆ ಎಂದು ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ನಾನು ಕೂಡ ಪ್ರತಿದಿನವು ಮಾಕ್ ಟೇಲ್ ಸೇವಿಸುತ್ತಿದ್ದು ಚೆನ್ನಾಗಿದೆ. ರುಚಿ ಮತ್ರು ಪೇಯ ಎರಡು ಹೊಸತು ಎಂದ ಗ್ರಾಹಕ   ಗುರುಮೂರ್ತಿ ಸ್ವಾದ ಕುರಿತು ತಿಳಿಸಿದರು.

Conclusion:ಒಟ್ಟಿನಲ್ಲಿ ರೆಸಾರ್ಟ್, ಬೀಚ್ ಗಳಲ್ಲಷ್ಟೆ ಸಿಗುತ್ತಿದ್ದ ಮಾಕ್ ಟೇಲ್ ಈಗ ಟೀ ಅಂಗಡಿಗೂ ಅಡಿಯಿಟ್ಟಿರುವುದರಿಂದ ರೈತರು, ಯುವಕರು, ಹಳ್ಳಿಗರೂ ಕೂಡ ಮಾಕ್ ಟೇಲ್ ಅಸ್ವಾದಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.