ETV Bharat / state

ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಚಿಹ್ನೆ ಇರುವ ಬ್ಯಾನರ್ ಬಳಕೆ: ಕಾಂಗ್ರೆಸ್​ ಜನಪ್ರತಿನಿಧಿಗಳು ಆಕ್ರೋಶ - Gundlupete

ಬೇಗೂರು ಹೋಬಳಿಯ ಐದು ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇರುವ ಬ್ಯಾನರ್ ಬಳಸಿದ್ದು, ಇದಕ್ಕೆ ಕಾಂಗ್ರೆಸ್​ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಬ್ಯಾನರ್​ ತೆಗೆಯಲಾಗಿದೆ.

BJP
ಬಿಜೆಪಿ ಬ್ಯಾನರ್​ ಬಳಕೆ
author img

By

Published : Nov 26, 2020, 7:49 PM IST

ಗುಂಡ್ಲುಪೇಟೆ: ರಾಘವಾಪುರ ಕೆರೆ ಆವರಣದಲ್ಲಿ ಇಂದು ಸಂಜೆ ನಡೆದ ಬೇಗೂರು ಹೋಬಳಿಯ ಐದು ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇರುವ ಬ್ಯಾನರ್ ಬಳಸಲಾಗಿದೆ ಎಂದು ಕಾಂಗ್ರೆಸ್ ಜನಪ್ರತಿನಿಧಿಗಳು ವೇದಿಕೆ ಏರಲು ನಿರಾಕರಿಸಿದ ಘಟನೆ ನಡೆದಿದೆ.

ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಅಶ್ವಿನಿ ವಿಶ್ವನಾಥ್, ಉಪಾಧ್ಯಕ್ಷೆ ಶಶಿಕಲಾ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಮಧುಶಂಕರ್, ಉಪಾಧ್ಯಕ್ಷೆ ಸುಮಿತ್ರಾ ಮಹೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ವೇದಿಕೆ ಏರಲು ನಿರಾಕರಿಸಿ ಹೊರಗೆ ನಿಲ್ಲುವುದಾಗಿ ತಿಳಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಶಾಸಕ ಸಿ.ಎಸ್.ನಿರಂಜನ ಕುಮಾರ್ ಎದುರಲ್ಲೇ ಬ್ಯಾನರ್ ತೆಗೆಯಲಾಗಿದೆ.

ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧುಂಕರ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಚಿಹ್ನೆ ಇರುವ ಬ್ಯಾನರ್ ಹಾಕಿರುವುದು ಖಂಡನೀಯ ಎಂದು ವಿರೋಧ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.