ETV Bharat / state

ಕಾಡಿನಿಂದ ಕಾಲೇಜಿಗೆ ಬಂದು ತಬ್ಬಿಬ್ಬಾದ ಜೋಡಿ ಜಿಂಕೆಗಳು...! - kannadanews

ಆಹಾರ ಅರಸಿ ಕಾಲೇಜು ಆವರಣಕ್ಕೆ ಬಂದ ಜಿಂಕೆಗಳು. ಜನರನ್ನ ಕಂಡು ತಬ್ಬಿಬ್ಬಾದ ಜಿಂಕೆಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು.

ಆಹಾರ ಅರಸುತ್ತಾ ಕಾಲೇಜು ಆವರಣಕ್ಕೆ ಬಂದ ಜಿಂಕೆಗಳು
author img

By

Published : Jul 10, 2019, 2:52 AM IST

ಚಾಮರಾಜನಗರ: ಆಹಾರ ಅರಸಿ ಜೋಡಿ ಜಿಂಕೆಗಳು ಕಾಲೇಜಿನ ಆವರಣಕ್ಕೆ ಬಂದು ತಬ್ಬಿಬ್ಬಾಗಿ ಓಡಾಡಿ ಘಟನೆ ಹನೂರು ಸಮೀಪದ ಮಾರ್ಗರೇಟ್ ಕಾಲೇಜ್​ ಬಳಿ ನಡೆದಿದೆ.

ಜನರನ್ನು ಕಂಡ ಕೂಡಲೇ ಭಯದಿಂದ ಗಲಿಬಿಲಿಗೊಂಡ ಜಿಂಕೆಗಳು ಅತ್ತಿಂದಿತ್ತ-ಇತ್ತಿಂದತ್ತ ಓಡಾಡಿ, ಹಿಡಿಯಲು ಬಂದವರನ್ನು ಕಂಡು ಓಡಿದ ಪ್ರಸಂಗವೂ ನಡೆಯಿತು. ಓಡಾಡುತ್ತಿದ್ದ ಜಿಂಕೆಗಳನ್ನು ಕಂಡ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೊನೆಗೂ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

deer
ಆಹಾರ ಅರಸಿ ಕಾಲೇಜು ಆವರಣಕ್ಕೆ ಬಂದ ಜಿಂಕೆಗಳು

ನೀರಡಿಕೆ, ಹಸಿರು ಮೇವಿನ ಕೊರತೆಯಿಂದಾಗಿ ಜಿಂಕೆಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವ ಘಟನೆ ಆಗಾಗ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸ್ಥಳೀಯರು ಮಾನವೀಯತೆ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Intro:ಜಿಂಕೆಮರಿ ಹಿಡಿದಾಯ್ತು ನೋಡ್ಲಾ ಮಗಾ.... ಕಾಲೇಜಿಗೆ ಬಂದ ಜೋಡಿ ಜಿಂಕೆ ಸುರಕ್ಷಿತವಾಗಿ ಕಾಡಿಗೆ!

ಚಾಮರಾಜನಗರ: ಆಹಾರ ಅರಸುತ್ತಾ ಅರಸುತ್ತಾ ಜೋಡಿ ಜಿಂಕೆಗಳು ಕಾಲೇಜಿನ ಆವರಣಕ್ಕೆ ಬಂದು ತಬ್ಬಿಬ್ಬಾಗಿ ಓಡಾಡುತ್ತಿದ್ದ ಘಟನೆ ಹನೂರು ಸಮೀಪದ ಮಾರ್ಗರೇಟ್ ಕಾಲೇಜಿನಲ್ಲಿ ನಡೆಯಿತು.

Body:ಜನರನ್ನು ಕಂಡ ಕೂಡಲೇ ಭಯದಿಂದ ಗಲಿಬಿಲಿಗೊಂಡ ಜಿಂಕೆಗಳು ಅತ್ತಿಂದಿತ್ತ-ಇತ್ತಿಂದತ್ತ ಓಡಾಡಿ ಹಿಡಿಯಲು ಬಂದವರನ್ನು ಓಡಾಡಿದ ಪ್ರಸಂಗವೂ ನಡೆಯಿತು.

ಓಡಾಡುತ್ತಿದ್ದ ಜಿಂಕೆಗಳನ್ನು ಕಂಡ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೊನೆಗೂ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

Conclusion:ನೀರಡಿಕೆ, ಹಸಿರು ಮೇವಿನ ಕೊರತೆಯಿಂದಾಗಿ ಜಿಂಕೆಗಳು ಅಹಾರ ಅರಸುತ್ತಾ ನಾಡಿನತ್ತ ಬರುತ್ತಿರುವ ಘಟನೆ ಆಗಾಗ್ಗೆ ಜಿಲ್ಲೆಯಲ್ಲಿ ನಡೆಯುತ್ತಿದ್ದು ಸ್ಥಳೀಯರು ಮಾನವೀಯತೆ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.