ಕೊಳ್ಳೇಗಾಲ: ತಾಲೂಕಿನ ರಾಚಪ್ಪಾಜಿನಗರ ಗ್ರಾಮದಲ್ಲಿ ಮನೆಗೆ ಹೊಂದಿಕೊಂಡಿರುವ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶಕ್ಕೆ ಅಕ್ರಮವಾಗಿ 370 ಗ್ರಾಂ ಒಣ ಗಾಂಜಾ ದಾಸ್ತಾನು ಮಾಡಿದ್ದ ಕಿರಾಣಿ ಮಾಲೀಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಹದೇವಸ್ವಾಮಿ ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಡಿ.ಸುನೀಲ್ ಹಾಗೂ ಉಪ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.