ETV Bharat / state

ಸಾರಿಗೆ ನೌಕರರ ಮುಷ್ಕರ: ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ಒಂದೂವರೆ ಕೋಟಿ ನಷ್ಟ - ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ನಷ್ಟ

ಶುಕ್ರವಾರ ಮಧ್ಯಾಹ್ನದಿಂದ ಇಂದು ಸಂಜೆಯವರೆಗೆ ಸಂಸ್ಥೆಯ ನೌಕರರು ಮುಷ್ಕರ ಹೂಡಿದ ಪರಿಣಾಮ ಅಂದಾಜು ಒಂದೂವರೆ ಕೋಟಿ ರೂ. ನಷ್ಟವಾಗಿದೆ ಎಂದು ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

One and a half crore loss to KSRTC Chamarajanagar division
ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ಒಂದೂವರೆ ಕೋಟಿ ನಷ್ಟ
author img

By

Published : Dec 14, 2020, 9:48 PM IST

ಚಾಮರಾಜನಗರ : ಸಾರಿಗೆ ನೌಕರರ ಮುಷ್ಕರದಿಂದ ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ ಬರೋಬ್ಬರಿ ಒಂದೂವರೆ ಕೋಟಿ ರೂ. ಅಂದಾಜು ನಷ್ಟ ಉಂಟಾಗಿದೆ.

ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಶುಕ್ರವಾರ ಮಧ್ಯಾಹ್ನದಿಂದ ಇಂದು ಸಂಜೆಯವರೆಗೆ ಸಂಸ್ಥೆಯ ನೌಕರರು ಮುಷ್ಕರ ಹೂಡಿದ ಪರಿಣಾಮ ಅಂದಾಜು ಒಂದೂವರೆ ಕೋಟಿ ರೂ. ನಷ್ಟವಾಗಿದೆ. ನೌಕರರ ಮುಷ್ಕರಿಂದ ಚಾಮರಾಜನಗರ- ಮೈಸೂರು, ಗುಂಡ್ಲುಪೇಟೆ- ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಹೊರ ರಾಜ್ಯಗಳಿಗೆ ಸಂಚರಿಸುತ್ತಿದ್ದ ಬಸ್​ಗಳ ಕಳೆದ ನಾಲ್ಕು ದಿನಗಳಿಂದ ಓಡಾಟ ನಿಲ್ಲಿಸಿದ್ದವು ಎಂದು ತಿಳಿಸಿದ್ದಾರೆ.

ಕೆಎಸ್​ಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್

ಇದನ್ನೂ ಓದಿ : ಮೂರು ದಿನದ ಸಾರಿಗೆ ಮುಷ್ಕರದಿಂದ ಎನ್​ಇಕೆಎಸ್ಆರ್​​ಟಿಸಿಗೆ ಆದ ನಷ್ಟ ಎಷ್ಟು ಗೊತ್ತಾ?

ನಷ್ಟವನ್ನು ಯಾವ ರೀತಿ ತುಂಬಬಹುದು ಎಂಬುವುದರ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕಿದೆ. ನಮ್ಮ ವಿಭಾಗದ ವ್ಯಾಪ್ತಿಯಲ್ಲಿ ನೌಕರರ ಪ್ರತಿಭಟನೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬಸ್​ಗಳ ಸಂಚಾರ ಪುನಾರಂಭವಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.