ETV Bharat / state

ಊಟಿ ವೃತ್ತದಲ್ಲಿ ಬೀಡುಬಿಟ್ಟ ಮೂವರು ವ್ಯಕ್ತಿಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

ಕೊರೊನಾ ಸಮಯದಲ್ಲಿ ಈ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದರೆ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಅನ್ನೋದು ಇಲ್ಲಿನ ನಿವಾಸಿಗಳ ದೂರು.

ಗುಂಡ್ಲುಪೇಟೆ
ಗುಂಡ್ಲುಪೇಟೆ
author img

By

Published : Jul 27, 2020, 10:54 PM IST

ಗುಂಡ್ಲುಪೇಟೆ: ಪಟ್ಟಣದ ಊಟಿ ವೃತ್ತದ ಬಳಿ ಉತ್ತರ ಪ್ರದೇಶದಿಂದ ಬಂದಿರುವ ಮೂವರು ವಾರದಿಂದ ಬೀಡುಬಿಟ್ಟಿದ್ದರೂ ಸಹ ತಾಲ್ಲೂಕು ಆಡಳಿತವಾಗಲಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯಾಗಲಿ ಇವರ ಬಗ್ಗೆ ಗಮನ ಹರಿಸಿಲ್ಲ ಎಂದು ದಲಿತ ಮುಖಂಡ ಕೂತನೂರು ಶಿವಯ್ಯ ಆರೋಪಿಸಿದರು.

ಕೊರೊನಾ ಸಮಯದಲ್ಲಿ ಈ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದರೆ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಈ ಮೂವರು ಬಂದು ವಾರದಿಂದ ಇಲ್ಲಿಯೇ ವಾಸವಾಗಿದ್ದಾರೆ. ಸ್ಪಷ್ಟವಾಗಿ ಮಾತನಾಡುತ್ತಾರೆ. ಅಲ್ಲಿಂದ ಹೇಗೆ ಬಂದರು? ಇವರ ಬಳಿ ದಾಖಲೆಗಳು ಇವೆಯೇ? ಎಂದು ವಿಚಾರಣೆ ಮಾಡಿ ಕ್ವಾರಂಟೈನ್‌ಗೆ ಕಳುಹಿಸಬೇಕು ಅಥವಾ ಸ್ವಂತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಶಿವಯ್ಯ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.