ಚಾಮರಾಜನಗರ: ಕಳೆದ 25ರಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ರಾಷ್ಟ್ರೀಯ ಹೆದ್ದಾರಿ 209ರ ಅಟ್ಟುಗೂಳೀಪುರ, ಕೋಳಿಪಾಳ್ಯ-ಪುಣಜನೂರು ಮಾರ್ಗದ ರಸ್ತೆ ಕಾಮಗಾರಿಯ ಆಮೆಗತಿ ಕಾರ್ಯವನ್ನು ವೀಕ್ಷಿಸಿದ್ದರು. ಈ ವೇಳೆ ಮುಂದಿನ 10 ದಿನದೊಳಗೆ ರಸ್ತೆಯ ಗುಂಡಿಗಳನ್ನು ಮುಚ್ಚಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಕಾಮಗಾರಿಯೇ ಪ್ರಾರಂಭವಾಗಿಲ್ಲ.
ಚಾಮರಾಜನಗರ ತಾಲೂಕಿನ ಅಟ್ಟುಗೂಳೀಪುರದಿಂದ ಪುಣಜನೂರು ಮಾರ್ಗದಲ್ಲಿನ 22 ಕಿ.ಮೀ ರಸ್ತೆ ಕಾಮಗಾರಿಗಾಗಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ. ತಮಿಳುನಾಡು ಮಾದರಿಯಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಂಡು ಮುಂದಿನ 2 ತಿಂಗಳೊಳಗೆ ಪೂರ್ಣಗೊಳಿಸಬೇಕು. 3-4 ಅಡಿಗಳಷ್ಟು ಆಳದ ರಸ್ತೆ ಗುಂಡಿಗಳಾಗಿರುವುದರಿಂದ ಮೊದಲು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು.
ರಸ್ತೆ ಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟ ಸಂಸದರು... ಡೆಡ್ ಲೈನ್ ಪಾಲನೆಯಾಗುತ್ತೆ ಅನ್ನೋದೆ ಡೌಟು!?
ಸಂಸದರು ನೀಡಿದ ಗಡುವು ಪಾಲನೆಯಾಗುವುದೇ ಅನುಮಾನ ಎಂದು ಅವರು ಗಡುವು ನೀಡಿದ ದಿನವೇ ರಸ್ತೆಗುಂಡಿ ಮುಚ್ಚಲು 10 ದಿನ ಸಮಯ ಕೊಟ್ಟರು. ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ ಈಟಿವಿ ಭಾರತ, ಡೆಡ್‌ಲೈನ್ ಪಾಲನೆಯಾಗುತ್ತೆ ಅನ್ನೋದೇ ಡೌಟು ಎಂಬ ಬಗ್ಗೆ ವರದಿ ಬಿತ್ತರಿಸಿತ್ತು. ಇದೀಗ ವರದಿ ನಿಜವಾಗಿದ್ದು ಸಂಸದರು ಭೇಟಿ ನೀಡಿ 1 ತಿಂಗಳಾದರೂ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇದರಿಂದಾಗಿ ವಾಹನ ಸಂಚಾರ ಹೆಚ್ಚಿದ್ದು, ರಸ್ತೆಬದಿ ಜಮೀನುಗಳ ಬೆಳೆಗೆ, ಬೈಕ್ ಸವಾರರಿಗೆ ಧೂಳು ಮಾರಕವಾಗಿ ಪರಿಣಮಿಸಿದೆ.